ಮುಂಬೈ: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಆರ್.ಡಿ. ಮೇಲಿನ ಬಡ್ಡಿ ದರವನ್ನು ಶೇ. 0.15 ರಷ್ಟು ಇಳಿಸಿದೆ.
ಜ.10 ರಂದು ಎಸ್.ಬಿ.ಐ., ಎಫ್.ಡಿ. ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿತ್ತು. ಬ್ಯಾಂಕ್ ಹೊಸ ದರದ ಪ್ರಕಾರ 1 ರಿಂದ 10 ವರ್ಷಗಳ ಅವಧಿಯ ಆರ್.ಡಿ. ಖಾತೆಗಳ ಬಡ್ಡಿ ದರಗಳು ಶೇ. 6.25 ರಿಂದ 6.10 ಕ್ಕೆ ಇಳಿದಿವೆ.
ಅಂಚೆ ಕಚೇರಿಯಾ ಆರ್.ಡಿ.ಗೇ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರ್.ಡಿ. ಮೇಲೆ ಶೇ.6.10 ರಂತೆ ಬಡ್ಡಿ ನೀಡಿದರೆ, ಅಂಚೆ ಕಚೇರಿಯಲ್ಲಿ ಶೇ.7.20 ರಷ್ಟು ಬಡ್ಡಿ ಸಿಗುತ್ತಿದೆ.
SBIನಿಂದ RD ಬಡ್ಡಿ ದರ ಕಡಿತ
Follow Us