ನವದೆಹಲಿ: ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನೀತಿನಿಯಮಗಳಿದೆ. ಆದರೆ ತ್ವರಿತಗತಿಯಲ್ಲಿ ಮಾಹಿತಿ ಹರಡುವ ಡಿಜಿಟಲ್ ಡಿಜಿಟಲ್ ಮಾಧ್ಯಮಕ್ಕೆ ನಿರ್ಬಂಧದ ಅಗತ್ಯವಿದೆ ಸುಪ್ರೀಂಗೆ ಕೇಂದ್ರ ಮನವಿ ಮಾಡಿದೆ.
ವಾಟ್ಸ್‍ಆಫ್,ಫೇಸ್‍ಬುಕ್,ಟ್ವೀಟರ್ ನಂತಹ ಸಾಮಾಜಿಕ ಜಾಲತಾಣಗಳು ಅತ್ಯಂತ ವೇಗವಾಗಿ ಮಾಹಿತಿ ಹಂಚುತ್ತವೆ. ಇಂತಹ ಡಿಜಿಟಲ್ ಮಾಧ್ಯಮಗಳಿಗೆ ನಿಯಂತ್ರಣ ವಿಧಿಸುವ ಅಗತ್ಯವಿದೆ ಎಂದು ಕೇಂದ್ರ ವಾರ್ತಾ ಹಾಗೂ ಪ್ರಚಾರ ಸಚಿವಾಲಯ ಸುಪ್ರೀಂ ಕೋರ್ಟ ಮುಂದೇ ಪ್ರಮಾಣಪತ್ರ ಸಲ್ಲಿಸಿದೆ.
ಡಿಜಿಟಲ್ ಮಾಧ್ಯಮಗಳು ವಿಶ್ವದ ಮೂಲೆ ಮೂಲೆಗೂ ಸುದ್ದಿ,ಮಾಹಿತಿ ತಲುಪಿಸುವ ವೇಗ ಹಾಗೂ ಅದು ಬೀರುವ ಗಂಭೀರ ಪ್ರಮಾಣ ಆಧರಿಸಿ ಡಿಜಿಟಲ್ ಮಾಧ್ಯಮಕ್ಕೆ ನಿಯಂತ್ರಣ ಹೇರಬಹುದಾಗಿದೆ ಎಂದು ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಅಭಿಪ್ರಾಯಿಸಿದೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗಿಂತ ಹೇಗೆ ಭಿನ್ನವಾಗಿ ಮಾಹಿತಿ ಡಿಜಿಟಲ್ ಮಾಧ್ಯಮದ ಮೂಲಕ ಜನರನ್ನು ತಲುಪುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಗೆ ಮನವಿ ಮಾಡಿಸುವ ಪ್ರಯತ್ನ ಮಾಡಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರ ಕುರಿತು ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯವನ್ನು ಕೇಂದ್ರ ಸಲ್ಲಿಸಿದೆ.