ಬೆಂಗಳೂರು: ರಿಲಯನ್ಸ್ ಜಿಯೋ 3ನೇ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇ 36.4 ರಷ್ಟು ಏರಿಕೆ ದಾಖಲಿಸಿದ್ದು,1,350 ಕೋಟಿ ರೂ. ಲಾಭ ಗಳಿಸಿದೆ.
ಈ ಹಣಕಾಸು ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಇದರ ಮೌಲ್ಯ 11,640 ಕೋಟಿ ರೂಪಾಯಿಗಳಾಗಿದೆ.
ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರಿಲಯನ್ಸ್ ರೂ.10, 251 ಕೋಟಿ ನಿವ್ವಳ ಲಾಭವನ್ನು ದಾಖಲಿಸಿತ್ತು. ಆಗಿನ ಆದಾಯ ರೂ.1.71 ಲಕ್ಷ ಕೋಟಿ ಗಳಷ್ಟಿದ್ದರೆ, ಈ ಬಾರಿ ರೂ. 1.68 ಲಕ್ಷ ಕೋಟಿ ಆದಾಯ ಗಳಿಕೆಯಾಗಿದೆ.
ರಿಲಯನ್ಸ್ ಜಿಯೋಗೆ 3 ತಿಂಗಳಲ್ಲಿ 1350 ಕೋಟಿ ರೂ. ಲಾಭ
Follow Us