Thursday, June 17, 2021

ಧರ್ಮಾಧಾರಿತ ದಬ್ಬಾಳಿಕೆ ಸಲ್ಲ: ಮೋದಿ

ತುಮಕೂರು: ಸಿದ್ಧಗಂಗಾ ಶ್ರೀ ಹಾಗೂ ಪೇಜಾವರ ಶ್ರೀಗಳ ಭೌತಿಕ ಅನುಪಸ್ಥಿತಿ ನನ್ನನ್ನು ಕಾಡುತ್ತಿದ್ದು, ಶೂನ್ಯ ಆವರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರೀಗಳ ವಸತಿಸಂಗ್ರಹಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಎಲ್ಲರಿಗೂ ಕನ್ನಡದಲ್ಲೇ ಹೊಸ ವರ್ಷದ ಶುಭಾಶಯ ತಿಳಿಸಿದರು. ಶಿಲಾನ್ಯಾಸ ಮಾಡುತ್ತಿರುವುದು ನನ್ನ ಸೌಭಾಗ್ಯ ಎಂದರು.
ದೊಡ್ಡ ಬದಲಾವಣೆಗಾಗಿ ಜನರು ಆಶೀರ್ವಾದ ಮಾಡಿದ್ದಾರೆ. ಆದ್ದರಿಂದಲೇ ನವಭಾರತಕ್ಕೆ ಅಡಿಪಾಯ ಹಾಕಿದ್ದೇವೆ. ೨೧ ಶತಮಾನದ ಮೂರನೇ ದಶಕದಲ್ಲಿ ಬಲವಾದ ಅಡಿಪಾಯ ಹಾಕಿದ್ದೇವೆ. ಬಡತನದ ಸಂಕೋಲೆಯಿಂದ ಭಾರತವನ್ನು ಮುಕ್ತ ಮಾಡೋಣ ಎಂದರು.
ಧರ್ಮದ ಆಧಾರದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ತಡೆಯಲು ಕಾನೂನು ರೂಪಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಸಮಯ ಕೂಡಿಬಂದಿದೆ ಎಂದೂ ಹೇಳಿದರು.

ನಾನು ತುಮಕೂರಿಗೆ ಆಗಮಿಸಿರುವುದು ಸಂತೋಷವಾಗುತ್ತಿದೆ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಕನ್ನಡದಲ್ಲೆ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಮಠ ಎಲ್ಲರ ಜೀವನದಲ್ಲಿ ಮಂಗಳ ತಂದಿದೆ. ಬಹಳ ವರ್ಷದ ನಂತರ ಆಗಮಿಸಿದ್ದೇನೆ. ಸಮಾಜದ ಸುಧಾರಣೆಯಲ್ಲಿ ಮಠದ ಪಾತ್ರ ದೊಡ್ಡದಿದೆ ಎಂದರು.
ಇದಕ್ಕೂ ಮೊದಲು ಅವರು ಶ್ರೀಸಿದ್ದಗಂಗಾ ಮಠದ ಆವರಣದಲ್ಲಿ ಇರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಮಾಡಿದರು. ಗದ್ದುಗೆ ದರ್ಶನಕ್ಕೆ ತೆರಳುವ ವೇಳೆ ಅವರು ವಿದ್ಯಾರ್ಥಿಗಳತ್ತ ಕೈಬೀಸಿದರು. ಗದ್ದುಗೆ ದರ್ಶನ ಮಾಡಿದ ನಂತರ ಅವರು ನೇರವಾಗಿ ವೇದಿಕೆಗೆ ಆಗಮಿಸಿದರು. ಶ್ರೀಸಿದ್ದಲಿಂಗ ಸ್ವಾಮೀಜಿ ಅವರು ಮೋದಿ ಅವರಿಗೆ ಶಿವಕುಮಾರ ಸ್ವಾಮೀಜಿ ಅವರ ಬೆಳ್ಳಿ ವಿಗ್ರಹವನ್ನು ನೀಡಿದರು.

ಮತ್ತಷ್ಟು ಸುದ್ದಿಗಳು

Latest News

ಗಾಜಿಯಾಬಾದ್ ಹಲ್ಲೆ ಪ್ರಕರಣ: ನಟಿ‌ ಸ್ವರಾ, ಟ್ವಿಟರ್ ಎಂಡಿ‌ ವಿರುದ್ಧ ದೂರು

newsics.com ನವದೆಹಲಿ: ಗಾಜಿಯಾಬಾದ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್, ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತಿತರರ ವಿರುದ್ಧ ದೂರು ಬಂದಿದೆ ಎಂದು...

ಜುಲೈ 31ರೊಳಗೆ ಸಿಬಿಎಸ್ಇ 12ನೇ ತರಗತಿ ಫಲಿತಾಂಶ

newsics.com ನವದೆಹಲಿ: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಜುಲೈ 31ರೊಳಗೆ ಪ್ರಕಟವಾಗಲಿದೆ. ಗುರುವಾರ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಗೆ ಈ‌ ಮಾಹಿತಿ ನೀಡಿದೆ. ಇಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಅವರು ಸಿಬಿಎಸ್ಇಗೆ 10,...

ನೇಪಾಳದಲ್ಲಿ ಭಾರೀ ಮಳೆ, 7 ಮಂದಿ ಪ್ರವಾಹಪಾಲು, ಮೂವರು ಭಾರತೀಯರೂ ಸೇರಿ‌ ಹಲವರು ನಾಪತ್ತೆ

newsics.com ಕಠ್ಮಂಡು(ನೇಪಾಳ): ಭಾರೀ ಮಳೆಯಿಂದಾಗಿ ಕಠ್ಮಂಡು ಸೇರಿ‌ ನೇಪಾಳಾದ ಹಲವೆಡೆ ದಿಢೀರ್ ಪ್ರವಾಹ ಉಂಟಾಗಿದ್ದು, ಪ್ರವಾಹ ಸಂಬಂಧಿ ದುರಂತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಮೂವರು ಭಾರತೀಯರೂ ಸೇರಿ ಕನಿಷ್ಠ 50 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು...
- Advertisement -
error: Content is protected !!