Saturday, April 17, 2021

ಭವಿಷ್ಯ ನಿಧಿ ಠೇವಣಿಗೆ ಶೇ.8.5ರ ಬಡ್ಡಿ ದರ: ಇಪಿಎಫ್ಒ ಘೋಷಣೆ

newsics.com
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಶೇ.8.5ರ ಬಡ್ಡಿ ದರವನ್ನು ಉಳಿಸಿಕೊಳ್ಳಲು ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ನಿರ್ಧರಿಸಿದೆ.
ಶ್ರೀನಗರದಲ್ಲಿ ಗುರುವಾರ (ಮಾ.4) ನಡೆದ ಇಪಿಎಫ್ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ, ಆದಾಯ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿದ ನಂತರ ಶೇ.8.5ರ ಬಡ್ಡಿದರಕ್ಕೆ ಅನುಮೋದನೆ ನೀಡಿದೆ ಎಂದು ಮಂಡಳಿ ಅಧಿಕೃತ ಘೋಷಣೆ ಮಾಡಿದೆ. ಈ ಮೂಲಕ ಐದು ಕೋಟಿಗೂ ಹೆಚ್ಚು ಸಕ್ರಿಯ ಇಫಿಎಫ್‌ಒ ಚಂದಾದಾರರಿಗೆ ಸಿಹಿಸುದ್ದಿ ನೀಡಿದೆ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆ ಸದಸ್ಯರು ಹೆಚ್ಚು ಹಣ ಹಿಂತೆಗೆದುಕೊಳ್ಳುವಿಕೆ ಮತ್ತು ಕಡಿಮೆ ಕೊಡುಗೆಯ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ಇಪಿಎಫ್ಒ ಈ ಹಣಕಾಸು ವರ್ಷದ (2020-21) ಭವಿಷ್ಯನಿಧಿ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ.8.5ರಿಂದ ಕಡಿಮೆ ಮಾಡಲಿದೆ ಎಂಬ ವದಂತಿಗಳಿಗೆ ಈ ಘೋಷಣೆ ಮೂಲಕ ತೆರೆ ಎಳೆದಿದೆ.
ಕಳೆದ ವರ್ಷ ಮಾರ್ಚ್’ನಲ್ಲಿ ಇಪಿಎಫ್ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು 2019-20ರಲ್ಲಿ ಶೇ.8.5ಕ್ಕೆ ಇಳಿಸಿ, 2018-19ರಲ್ಲಿ ಶೇ.8.65ಕ್ಕೆ ಏರಿಸಿತ್ತು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಇಪಿಎಫ್ಒ ಗಳಿಕೆ ಸುಮಾರು 65,000 ಕೋಟಿ ರೂ. ಆಗಿದ್ದು, ಈ ವರ್ಷ ಶೇ.8.5ರಷ್ಟು ಹಣ ಪಾವತಿಸಲು ನಮಗೆ ಸಾಕಷ್ಟು ಅವಕಾಶ ಇದೆ ಎಂದು ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಕನ್ನಾ – ಪೆಂಚ್ ಹುಲಿ ರಕ್ಷಿತಾರಾಣ್ಯದಲ್ಲಿ ಮಹಿಳಾ ಮಾರ್ಗದರ್ಶಕಿಯರು

‘ಮೆಟ್ರೋ ಮ್ಯಾನ್’ ಶ್ರೀಧರನ್ ಕೇರಳ ಬಿಜೆಪಿ ಸಿಎಂ ಅಭ್ಯರ್ಥಿ

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...

41 ಅಕ್ರಮ ವಲಸಿಗರ ಜಲ ಸಮಾಧಿ

newsics.com ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ  ದುರಂತ ಸಂಭವಿಸಿದೆ. ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....
- Advertisement -
error: Content is protected !!