Wednesday, October 5, 2022

ಖ್ಯಾತ ಪತ್ರಕರ್ತ, ಸಾಹಿತಿ ರವಿ ಬೆಳಗೆರೆ ಇನ್ನಿಲ್ಲ

Follow Us

newsics.com
ಬೆಂಗಳೂರು: ಹಿರಿಯ ಪತ್ರಕರ್ತ, ಲೇಖಕ, ಸಾಹಿತಿ ಹಾಯ್ ಬೆಂಗಳೂರು ವಾರಪತ್ರಿಕೆ ಸಂಪಾದಕ ರವಿ ಬೆಳಗೆರೆ (62) ಗುರುವಾರ ತಡರಾತ್ರಿ (ನ.12) ಕೊನೆಯುಸಿರೆಳೆದರು.
ವಯೋಸಹಜ ಕಾಯಿಲೆಗಳಿಂದ ಅಸ್ವಸ್ಥರಾಗಿದ್ದ ರವಿ ಬೆಳಗೆರೆ ಬೆಂಗಳೂರಿನ ಪದ್ಮನಾಭನಗರದ ಕಚೇರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಬಳಿಕ ಅವರ ಪಾರ್ಥಿವ ಶರೀರವನ್ನು ಅವರ ನಿವಾಸ ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್’ಗೆ ಸ್ಥಳಾಂತರಿಸಲಾಗಿದೆ.

ರವಿ ಬೆಳಗೆರೆಯವರೇ ಸ್ಥಾಪಿಸಿದ ಪ್ರಾರ್ಥನಾ ಶಾಲೆ ಆವರಣದಲ್ಲಿ ಶುಕ್ರವಾರ (ನ.13) ಬೆಳಗ್ಗೆ 9 ರಿಂದ ಸಂಜೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು (ನ.13) ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, ಇಬ್ಬರು ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
ಸಕ್ಕರೆ ಕಾಯಿಲೆ ಮತ್ತು ಕಾಲುನೋವಿನಿನಿಂದ ಬಳಲುತ್ತಿದ್ದ ಅವರಿಗೆ ಶುಕ್ರವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ನಾನು ಪದ್ಮನಾಭನಗರದ ಕಚೇರಿ ತಲುಪುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ರವಿ ಬೆಳಗೆರೆ ಪುತ್ರ ಕರ್ಣ ತಿಳಿಸಿದ್ದಾರೆ.
1995ರಲ್ಲಿ ಹಾಯ್ ಬೆಂಗಳೂರು ಪತ್ರಿಕೆ ಆರಂಭಿಸಿದ್ದ ಅವರು ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹ, ಜೀವನ ಕಥನ, ಕವನ ಸಂಕಲನ ಸೇರಿದಂತೆ 70 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಜೀವಮಾನ ಸಾಧನೆಗಾಗಿ ಕಾರನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಬಳ್ಳಾರಿಯಲ್ಲಿ 1958 ಮಾರ್ಚ್ 15 ರಂದು ಜನಿಸಿದ್ದ ರವಿ ಬೆಳಗೆರೆ, ಬಳ್ಳಾರಿಯಲ್ಲೇ ಶಾಲಾ ಶಿಕ್ಷಣ ಮುಗಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ ಬಳಿಕ ಪತ್ರಕರ್ತರಾಗಿ, ಬರಹಗಾರರಾಗಿ ಹೆಸರಾಗಿದ್ದರು.
ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕರಾಗಿದ್ದ ಅವರು, ‘ಓ ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಖಾಸಗಿ ವಾಹಿನಿಯ ಎಂದೂ ಮರೆಯದ ಹಾಡು, ಕ್ರೈಂ ಡೈರಿ ಕಾರ್ಯಕ್ರಮಗಳ ನಿರೂಪಕರಾಗಿಯೂ ಕೆಲಸ ಮಾಡಿದ್ದರು. ಸಿನಿಮಾ ನಟರಾಗಿಯೂ ಗುರುತಿಸಿಕೊಂಡಿದ್ದರು.
ಹಿಮಾಲಯನ್ ಬ್ಲಂಡರ್, ಭೀಮಾ ತೀರದ ಹಂತಕರು, ನೀ ಹಿಂಗ ನೋಡಬ್ಯಾಡ ನನ್ನ, ಡಿ ಕಂಪನಿ, ಇಂದಿರೆಯ ಮಗ ಸಂಜಯ, ಕಲ್ಪನಾ ವಿಲಾಸ, ರಾಜರಹಸ್ಯ, ಟೈಮ್ ಪಾಸ್, ಕಂಪನಿ ಆಫ್ ವುಮೆನ್ ಮೊದಲಾದವು ಬೆಳಗೆರೆಯವರ ಪ್ರಸಿದ್ಧ ಕೃತಿಗಳು.

 ಓದುತ್ತಿರುವ ಪುಸ್ತಕವನ್ನೊಮ್ಮೆ ಪಕ್ಕಕ್ಕಿಟ್ಟು ಕಣ್ಣಲ್ಲಿ ಒಸರುತ್ತಿರುವ ಕಣ್ಣೀರನ್ನು ಒರೆಸಿಕೊಂಡು ಪುನಃ ಓದುವಂತಾದರೆ ಅದೇ ನನಗೆ ಸಿಗುವ ಸಂತೃಪ್ತಿ 
– ರವಿ ಬೆಳಗೆರೆ 

ಅಕ್ಷರ ಬೆಳೆಗಾರ

ಹುಬ್ಬಳ್ಳಿ ಪೊಲೀಸ್ ಕಮಿಷನರ್ ಲಾಬೂರಾಮ್ ಅಸ್ವಸ್ಥ; ಬೆಂಗಳೂರಿಗೆ ಏರ್’ಲಿಫ್ಟ್

ಮತ್ತಷ್ಟು ಸುದ್ದಿಗಳು

vertical

Latest News

ಪ್ರಪಾತಕ್ಕೆ ಉರುಳಿದ ಬಸ್: 25 ಮಂದಿ ಸಾವು, 23 ಪ್ರಯಾಣಿಕರಿಗೆ ಗಾಯ

newsics.com ಪೌರಿ (ಉತ್ತರಾಖಂಡ): ಬಸ್ಸೊಂದು 500 ಮೀಟರ್ ಪ್ರಪಾತಕ್ಕೆ ಉರುಳಿದ ಪರಿಣಾಮ 25 ಪ್ರಯಾಣಿಕರು ಸಾವನ್ನಪ್ಪಿದ ಭೀಕರ ದುರಂತ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ...

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...
- Advertisement -
error: Content is protected !!