Wednesday, May 25, 2022

ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂಗೆ ಬಿಜೆಪಿ ನಾಯಕರ, ಉದ್ಯಮಿಗಳ ಅಸಮಾಧಾನ

Follow Us

newsics.com

ಬೆಂಗಳೂರು: ರಾಜ್ಯಾದ್ಯಂತ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗೆ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ಬಗ್ಗೆ ಬಿಜೆಪಿ ನಾಯಕರು ಹಾಗೂ ಉದ್ಯಮಿಗಳ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಸರ್ಕಾರದ ನಿರ್ಧಾರ ಖಂಡಿಸಿ ಹೋಟೆಲ್ ಮಾಲೀಕರ ಸಂಘ ನಾಳೆ (ಜ.19) ನಡೆಸಲುದ್ದೇಶಿಸಿದ್ದ ಉದ್ಯಮಿಗಳ ಸಭೆಯನ್ನು ರದ್ದುಪಡಿಸಲಾಗಿದ್ದು, ನಾಳೆ ಸಚಿವ ಡಾ.ಸುಧಾಕರ್ ಜತೆ ಮಾತುಕತೆ‌ ನಡೆಸಲಿದ್ದಾರೆ.
ರಾಜ್ಯದಲ್ಲಿ ಲಾಕ್‌ಡೌನ್‌ನಂತಹ ಕಠಿಣ ನಿಯಮ ಜಾರಿ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ವೀಕೆಂಡ್, ಕರ್ಫ್ಯೂ ಹಾಗೂ ಲಾಕ್‌ಡೌನ್ ಬಗ್ಗೆ ಬಿಜೆಪಿ ನಾಯಕರೂ ವಿರೋಧ ವ್ಯಕ್ತಪಡಿಸಿದ್ದಾರೆ.

ಪಣಜಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಕೋವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡಬಹುದು ಆದರೆ ಇದರಿಂದ ಪ್ರಾಣಾಪಾಯ ಕಡಿಮೆ. ಕೋವಿಡ್ ನಿಯಂತ್ರಣಕ್ಕೆ ಕೆಲ ಕಠಿಣ ನಿಯಮ ಜಾರಿಗೆ ತರಲಿ. ಆದರೆ ಲಾಕ್‌ಡೌನ್ ಮಾಡಿ ಮತ್ತಷ್ಟು ಸಂಕಷ್ಟ ಕೊಡುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಬಿಹಾರ ರಾಜ್ಯಸಭೆಗೆ ಅವಿರೋಧ ಆಯ್ಕೆಯಾದ ಕನ್ನಡಿಗ

newsics.com ಬಿಹಾರ ರಾಜ್ಯಸಭೆಗೆ ಉಡುಪಿ ತಾಲೂಕಿನ ಸಳ್ವಾಡಿ ಮೂಲದ ಅನಿಲ್​ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಡಾ. ಮಹೇಂದ್ರ ಪ್ರಸಾದ್​ ನಿಧನದ ಬಳಿಕ ತೆರವಾಗಿದ್ದ ಈ ಸ್ಥಾನಕ್ಕೆ ಅನಿಲ್​ ಹೆಗ್ಡೆ...

ನಿರೂಪಕಿಯರು​ ಮುಖ ಮುಚ್ಚಿಕೊಳ್ಳಿ ಎಂದ ತಾಲಿಬಾನ್​ ವಿರುದ್ಧ ಫೇಸ್​ಮಾಸ್ಕ್​ ಅಭಿಯಾನ!

newsics.com ಮಹಿಳಾ ನಿರೂಪಕರಿಗೆ ಕೆಲಸದ ಸ್ಥಳದಲ್ಲಿ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು ಎಂದು ತಾಲಿಬಾನ್​ ಹೊರಡಿಸಿರುವ ಆದೇಶವನ್ನು ವಿರೋಧಿಸಿರುವ ಅಫ್ಘಾನಿಸ್ತಾನದ ಪುರುಷ ಸುದ್ದಿ ವಾಚಕರು ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಭಿಯಾನ ಆರಂಭಿಸಿದ್ದಾರೆ. ಅಭಿಯಾನದ ಭಾಗವಾಗಿ ಪುರುಷ ನಿರೂಪಕರು...

ಕೊಡಗಿನಲ್ಲಿ ಇದ್ದಕಿದ್ದಂತೆ ಕಾಣಿಸಿಕೊಂಡ ಕೆಮ್ಮು, ಕಣ್ಣಿನ ಉರಿ ; ಹೆಚ್ಚಿದ ಆತಂಕ

newsics.com ಮಡಿಕೇರಿ: ಇದ್ದಕಿದ್ದಂತೆ ಒಮ್ಮೆಲೆ ಅನೇಕ ಮಂದಿಯಲ್ಲಿ ಕೆಮ್ಮು ಮತ್ತು ಕಣ್ಣಿನ ಉರಿ ಕಾಣಿಸಿಕೊಂಡಿದ್ದು, ಕೊಡಗಿನ ಸಿದ್ದಾಪುರ ಮತ್ತು ವಿರಾಜಪೇಟೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮಾಸ್ಕ್ ಧರಿಸುವಂತೆ ಸ್ಥಳೀಯರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಸಿದ್ದಾರೆ....
- Advertisement -
error: Content is protected !!