ಮುಂಬೈ: ಬಾಂಬೆ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಸತ್ಯರಂಜನ್ ಧರ್ಮಾಧಿಕಾರಿ ರಾಜೀನಾಮೆ ನೀಡಿದ್ದಾರೆ.
ಕೌಟುಂಬಿಕ ಮತ್ತು ವೈಯಕ್ತಿಕ ಕಾರಣಗಳಿಂದ ಮಹಾರಾಷ್ಟ್ರದ ಹೊರಗೆ ವರ್ಗಾವಣೆಗೊಳ್ಳುವುದನ್ನು ಬಯಸದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
ತಮ್ಮ ನೇತೃತ್ವದ ಪೀಠದ ಮುಂದೆ ಮುಂದಿನ ವಾರ ಪ್ರಕರಣವೊಂದು ವಿಚಾರಣೆಗೆ ಬರಲಿದೆ ಎಂದು ನ್ಯಾಯವಾದಿ ಮ್ಯಾಥ್ಯೂ ನೆಡುಂಪಾರ ಅರಿಕೆ ಮಾಡಿಕೊಂಡಾಗ ನ್ಯಾ| ಧರ್ಮಾಧಿಕಾರಿ ‘ನಾನು ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಇವತ್ತೇ (ಶುಕ್ರವಾರ) ಕೊನೆಯ ಕೆಲಸದ ದಿನ’ ಎಂದರು.
ಜಡ್ಜ್ ಹಾಸ್ಯ ಮಾಡುತ್ತಿರಬಹುದು ಎಂದುಕೊಂಡಿದ್ದೆ. ಅವರ ನಿರ್ಧಾರ ಆಘಾತ ತಂದಿದೆ ಎಂದು ನೆಡುಂಪಾರಾ ಹೇಳಿದ್ದಾರೆ.
ಬಾಂಬೆ ಹೈಕೋರ್ಟ್ ಜಡ್ಜ್ ನ್ಯಾ.ಧರ್ಮಾಧಿಕಾರಿ ರಾಜೀನಾಮೆ
Follow Us