Tuesday, December 5, 2023

ನಿದ್ರಾವಸ್ಥೆಗೆ ಜಾರಿದ ರೋವರ್ ಪ್ರಜ್ಞಾನ್: ಸೆ.22ಕ್ಜೆ ಎಬ್ಬಿಸುವ ಯತ್ನ- ಇಸ್ರೋ ಮಾಹಿತಿ

Follow Us

newsics.com
ಬೆಂಗಳೂರು: ಚಂದ್ರಯಾನ 3ರ ರೋವರ್ ತನ್ನ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ರೋವರ್‌ನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಿ ನಿದ್ರಾವಸ್ಥೆಗೆ (ಸ್ಲೀಪ್ ಮೋಡ್) ಜಾರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ಟ್ವೀಟ್ ಮೂಲಕ ಈ ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಪ್ರಜ್ಞಾನ್‌ ರೋವರ್‌ನ್ನು ಸ್ಲೀಪ್ ಮೋಡ್‌ನಲ್ಲಿ ಇಡಲಾಗಿದೆ. APXS ಮತ್ತು LIBS ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಪೇಲೋಡ್‌ಗಳಿಂದ ದತ್ತಾಂಶ ಲ್ಯಾಂಡರ್ ಮೂಲಕ ರವಾನೆ ಆಗುತ್ತದೆ. ಪ್ರಸ್ತುತ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದೆ ಎಂದು ವಿವರಿಸಿದೆ.
ಸೆ.22ರಂದು ಚಂದ್ರಲೋಕದಲ್ಲಿ‌ ಮುಂದಿನ ಸೂರ್ಯೋದಯದಲ್ಲಿ ಬೆಳಕು ನಿರೀಕ್ಷಿಸಲಾಗಿದೆ. ಬೆಳಕು ಸ್ವೀಕರಿಸಲು ಸೌರಫಲಕದ ರಿಸೀವರ್‌ನ್ನು ಆನ್‌ನಲ್ಲಿ ಇರಿಸಲಾಗಿದೆ. ಮುಂದಿನ ಸೂರ್ಯೋದಯದಂದು ಕಾರ್ಯ ಮುಂದುವರಿಸುವ ವಿಶ್ವಾಸವಿದ್ದು, ಮತ್ತೊಂದು ಸುತ್ತಿನ ಅಸೈನ್‌ಮೆಂಟ್‌ಗೆ ರೋವರ್‌ ಸಿದ್ಧವಾಗುವ ಭರವಸೆ ಇದೆ. ಇದು ಸಾಧ್ಯವಾಗದಿದ್ದರೆ ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಇಸ್ರೋ ಟ್ವೀಟ್‌ನಲ್ಲಿ ಹೇಳಿದೆ.

ಚಂದ್ರನಲ್ಲಿ ಸಲ್ಫರ್ ಅಂದರೆ ಗಂಧಕ ಇರುವಿಕೆಯನ್ನು ರೋವರ್ ದೃಢಪಡಿಸಿತ್ತು. ಈ ಬಗ್ಗೆ ಇಸ್ರೋ ಟ್ವೀಟ್ ಸಹ ಮಾಡಿತ್ತು.

ಸದ್ಯ ಪ್ರಜ್ಞಾನ್ ರೋವರ್ ಈವರೆಗೆ ಸುಮಾರು 15ಕ್ಕೂ ಹೆಚ್ಚು ಮೀಟರ್ ದೂರವನ್ನು ಕ್ರಮಿಸಿದೆ. ಸೌರಶಕ್ತಿ ಚಾಲಿತ ಪ್ರಜ್ಞಾನ್ ರೋವರ್ ವೈಜ್ಞಾನಿಕ ಪ್ರಯೋಗಗಳನ್ನು ಮುಂದುವರೆಸುತ್ತಿದೆ. ಚಂದ್ರಯಾನದ ಮಿಷನ್ ಇನ್ನೂ ಕೆಲ ದಿನಗಳಿದ್ದು, ಮತ್ಯಾವ ವಿಸ್ಮಯವನ್ನು ಪ್ರಜ್ಞಾನ್ ರೋವರ್ ಪತ್ತೆ ಮಾಡಲಿದೆ ಎನ್ನುವುದು ಸದ್ಯದ ಕುತೂಹಲ.

ಚಂದ್ರಯಾನ-3 ಯಶಸ್ಸಿಗೆ ಕಾರಣವಾಯ್ತು ಈ ಮಸಾಲೆ ದೋಸೆ, ಫಿಲ್ಟರ್‌ ಕಾಫಿ!

ಈ ವರ್ಷ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 15 ಆನ್ಲೈನ್ ಕೋರ್ಸ್ ಆರಂಭ

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಹೇಳಿಕೆ: ರಾಜಸ್ಥಾನ ಸಿಎಂಗೆ ಹೈಕೋರ್ಟ್ ನೋಟಿಸ್

ಪ್ಲಾಸ್ಟಿಕ್ ಸರ್ಜರಿ ಎಫೆಕ್ಟ್: ಖ್ಯಾತ ನಟಿ,‌ ಮಾಡೆಲ್ ಸಿಲ್ವಿನಾ ಲೂನಾ ಇನ್ನಿಲ್ಲ

ಲಿವ್ ಇನ್ ರಿಲೇಷನ್‌ಶಿಪ್ ವೈವಾಹಿಕ ಸಂಬಂಧಗಳಿಗೆ ಮಾರಕ: ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ

ಮತ್ತಷ್ಟು ಸುದ್ದಿಗಳು

vertical

Latest News

ವಿಜಯೇಂದ್ರ ಪತ್ನಿ ಸಹೋದರನ ಮನೆ ಮೇಲೆ ಲೋಕಾಯುಕ್ತ ದಾಳಿ

Newsics.com ಕಲಬುರಗಿ : ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ನಿ ಸಹೋದರ ಡಾ ಪ್ರಭುಲಿಂಗ ಮಾನ್ಕರ್ ಅವರ ಮನೆ...

ಭಾರತದಲ್ಲಿ 75 ಲಕ್ಷಕ್ಕೂ ಅಧಿಕ ವಾಟ್ಸ್ ​ಆ್ಯಪ್ ಅಕೌಂಟ್ ಬ್ಯಾನ್

Newsics.com ನವದೆಹಲಿ : ಮೆಟಾದ ತ್ವರಿತ ಮೆಸೇಜಿಂಗ್ ಪ್ಲಾಟ್​ಫಾರ್ಮ್ ವಾಟ್ಸ್​ಆ್ಯಪ್ ಭಾರತದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 75 ಲಕ್ಷಕ್ಕೂ ಅಧಿಕ ವಾಟ್ಸ್​ ಆ್ಯಪ್ ಖಾತೆಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ. 2021 ಬಳಕೆದಾರರ ಸುರಕ್ಷತ...

ತೆಲಂಗಾಣದ ನೂತನ ಸಿಎಂ ಇವರೇ : ನಾಳೆಯೇ ಪ್ರಮಾಣ ವಚನ..!!

Newsics.com ಹೈದರಾಬಾದ್ : ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಇದೀಗ ಬಂದ ಮಾಹಿತಿ ಪ್ರಕಾರ, ರೇವಂತ್ ರೆಡ್ಡಿ ಅವರನ್ನೇ...
- Advertisement -
error: Content is protected !!