Saturday, October 16, 2021

ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್’ಗೆ 54 ರನ್’ಗಳ ಭರ್ಜರಿ ಜಯ

Follow Us

newsics.com

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಲ್ ಪಂದ್ಯದಲ್ಲಿ 54 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ನಾಯಕ ವಿರಾಟ್ ಕೊಹ್ಲಿ (51) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (56) ಅರ್ಧಶತಕಗಳ ಅಬ್ಬರದ ಬಳಿಕ ಹರ್ಷಲ್ ಪಟೇಲ್ ‘ಹ್ಯಾಟ್ರಿಕ್’ ವಿಕೆಟ್ (17ಕ್ಕೆ 4 ವಿಕೆಟ್) ಸಾಧನೆಯ ನೆರವಿನಿಂದ ಈ ಗೆಲುವು ಸಾಧ್ಯವಾಯಿತು.

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಎರಡನೇ ಹಂತದ ಟೂರ್ನಿಯಲ್ಲಿ ಸತತ ಎರಡು ಸೋಲಿನ ಬಳಿಕ ವಿರಾಟ್ ಕೊಹ್ಲಿ ಬಳಗವು ಮತ್ತೆ ಗೆಲುವಿನ ಹಾದಿಗೆ ಮರಳಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಆರು ವಿಕೆಟ್ ನಷ್ಟಕ್ಕೆ 165 ರನ್‌ಗಳ ಸವಾಲಿನ ಮೊತ್ತ ಸೇರಿಸಿತ್ತು. ಬಳಿಕ ‘ಹ್ಯಾಟ್ರಿಕ್’ ಸೇರಿದಂತೆ ನಾಲ್ಕು ವಿಕೆಟ್ ಕಿತ್ತ ಹರ್ಷಲ್ ದಾಳಿಗೆ ನಲುಗಿದ ಮುಂಬೈ 18.1 ಓವರ್‌ಗಳಲ್ಲಿ 111 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಯಜುವೇಂದ್ರ ಚಾಹಲ್ ಮೂರು ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಎರಡು ವಿಕೆಟ್ ಪಡೆದು ಮಿಂಚಿದರು.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಹೊಸದಾಗಿ 264 ಕೊರೋನಾ ಪ್ರಕರಣ ಪತ್ತೆ, 421 ಮಂದಿ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 264 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,83,133ಕ್ಕೆ ಏರಿಕೆಯಾಗಿದೆ. 421 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು...

ಲಸಿಕೆ ನೀಡಲು ಅಪಾಯಕಾರಿ ಬಿದಿರಿನ ಸೇತುವೆ ದಾಟಿದ ಆರೋಗ್ಯ ಕಾರ್ಯಕರ್ತ: ವಿಡಿಯೋ ವೈರಲ್

newsics.com ಅರುಣಾಚಲ ಪ್ರದೇಶ: ಇಲ್ಲಿನ ಆರೋಗ್ಯ ಕಾರ್ಯಕರ್ತರೊಬ್ಬರು ಜನರಿಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಲು ಬಿದಿರಿನ ಸೇತುವೆ ದಾಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರು ತಾತ್ಕಾಲಿಕವಾಗಿ ನಿರ್ಮಿಸಿದ ಅಪಾಯಕಾರಿ ಬಿದಿರಿನ ಸೇತುವೆ...

ಕಾಂಗ್ರೆಸ್‌ ನಾಯಕನ ಕೊಲೆ: ಪತ್ನಿಯ ಸ್ಥಿತಿ ಗಂಭೀರ

newsics.com ಜಾರ್ಖಂಡ್‌: ಕಾಂಗ್ರೆಸ್ ನಾಯಕನನ್ನು ದುಷ್ಕರ್ಮಿಗಳ ತಂಡ ಹೊಡೆದು ಕೊಂದಿರುವ ಘಟನೆ ಜಾರ್ಖಂಡ್‌ ನ ರಾಮ್ ಗಢದಲ್ಲಿ ನಡೆದಿದೆ. ರಾಮ್ ಗಢ ಜಿಲ್ಲಾ ಕಾಂಗ್ರೆಸ್‌ ನ ಮಾಜಿ ಪ್ರಧಾನ ಕಾರ್ಯದರ್ಶಿ ಕಮಲೇಶ್‌ ನಾರಾಯಣ ಶರ್ಮಾ...
- Advertisement -
error: Content is protected !!