Tuesday, April 13, 2021

ಜೋಳದ ಮೇವಿಗೆ ರಬ್ಬರ್ ಹುಳು ಕಾಟ; ರೈತರು ಕಂಗಾಲು

ವಿಜಯಪುರ: ಜಾನುವಾರುಗಳ ಮೇವಿಗಾಗಿ ಬೆಳೆಯುವ ಜೋಳದ ಬೆಳೆಗೆ ರಬ್ಬರ್ ಹುಳುವಿನ ಕಾಟ ರೈತರನ್ನು ಕಂಗೆಡಿಸಿದೆ.
ಕಟಾವಿಗೆ ಬಂದಿರುವ ಜೋಳದ ಗಿಡಗಳಲ್ಲಿ ಹುಳು ಕಾಣಿಸಿಕೊಂಡಿದ್ದು, ಅನಿವಾರ್ಯವಾಗಿ ಕ್ರಿಮಿನಾಶಕ ಸಿಂಪಡಿಸಲು ರೈತರು ಮುಂದಾಗಿದ್ದಾರೆ.
ಈ ಮೊದಲು ಮುಸುಕಿನ ಜೋಳದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ರಬ್ಬರ್ ಹುಳುಗಳು ಈಗ ಎಲ್ಲ ಬೆಳೆಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ದ್ವಿದಳ ಧಾನ್ಯದ ಬೆಳೆಗಳು, ಮೇವಿನ ಬೆಳೆಗಳ ಮೇಲೂ ದಾಳಿ ಮಾಡಿ ಬೆಳೆಗಳನ್ನು ನಾಶಪಡಿಸುತ್ತವೆ. ಮೊದಲ ಹಂತದಲ್ಲಿ ಮರಿ ಹುಳುಗಳು ಸಾಮೂಹಿಕವಾಗಿದ್ದು, ಎಲೆಗಳ ‘ಹರಿತ್ತು’ ಕೊರೆದು ತಿನ್ನುತ್ತಿವೆ. ಇದರಿಂದ ಎಲೆಗಳ ಮೇಲೆ ಪಾರದರ್ಶಕ ಪದರ ಕಾಣಿಸಿಕೊಳ್ಳುತ್ತಿದೆ.
40ರಿಂದ 50 ದಿನದ ಒಳಗೆ ಪ್ರವೇಶಿಸಿ ಕಾಳು ತಿಂದು ನಾಶಪಡಿಸುತ್ತವೆ. ತೋಟಗಳಲ್ಲಿಯೇ ಹಿಕ್ಕೆ ಹಾಕುತ್ತವೆ. ತೆನೆ ತುದಿಯಲ್ಲಿನ ಆಹಾರವನ್ನು ಮೊದಲು ಸೇವಿಸುತ್ತವೆ. ಹುಳುಗಳು ಸಂಜೆ ಹೊತ್ತು ಹೆಚ್ಚಾಗಿ ಹೊರಬರುವುದರಿಂದ ಸಂಜೆ ಹೊತ್ತಿನಲ್ಲೇ ಕೀಟನಾಶಕ ಸಿಂಪಡಿಸಬೇಕಾಗಿದೆ ಎನ್ನುತ್ತಾರೆ, ರೈತರು.
ಸೈನಿಕ ಹುಳು ಅಥವಾ ರಬ್ಬರ್ ಹುಳು ಅಮೆರಿಕದಿಂದ ಆಫ್ರಿಕಾ ಮೂಲಕ ಭಾರತಕ್ಕೆ ಬಂದಿದೆ. ಈ ಲದ್ದಿಹುಳು ಆಹಾರ ಖಾಲಿಯಾದ ತಕ್ಷಣ ಅನ್ವೇಷಣೆ ಆರಂಭಿಸುತ್ತದೆ. ಬಹು ಬೆಳೆ ಭಕ್ಷಕ ಕೀಟವಾಗಿದ್ದು, ಆಕ್ರಮಣಕಾರಿ ಪ್ರವೃತ್ತಿ ಹೊಂದಿದೆ. ಸೈನಿಕ ಹುಳುಗಳು ಚಿಟ್ಟೆಯಾಗಿ ಒಂದು ರಾತ್ರಿಗೆ 40 ಕಿ.ಮೀ ದೂರ ಹೋಗುತ್ತವೆ. ಹೋಗುವಾಗ ಮೊಟ್ಟೆಗಳನ್ನು ಇಟ್ಟುಕೊಂಡು ಹೋಗುತ್ತಿರುತ್ತವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಆದರ್ಶ್ ವಿವರಿಸಿದ್ದಾರೆ. ಹತೋಟಿಗೆ ಸೈಯಂತ್ರನಿಲಿಪೊಲ್‌, ಥಯೋ ಮೆಥಕ್ಸಾಮ್‌ 6 ಮಿ.ಲೀ. ಅನ್ನು 4 ಮಿ.ಲೀ. ನೀರು ಬೆರೆಸಿ ಪ್ರತಿ ಕಿಲೋಗ್ರಾಂ ಬೀಜಕ್ಕೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಬೇವಿನ ಬೀಜದ ಕಷಾಯವನ್ನು ಶೇ. 5ರಂತೆ ಅಥವಾ ಅಜಾಡಿರೆಕ್ಟಿನ್‌ 10,000 ಪಿಪಿಎಂನ 2 ಮಿ.ಲೀಯನ್ನು ಒಂದು ಲೀಟರ್‌ ನೀರಿಗೆ ಮಿಶ್ರಣ ಮಾಡಬೇಕು ಎಂದು ಆದರ್ಶ್ ಸಲಹೆ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!