newiscs.com
ಮುಂಬೈ: ದೇಶದಲ್ಲಿ ನವೆಂಬರ್ ವೇಳೆಗೆ ರಷ್ಯಾದ `ಸ್ಪುಟ್ನಿಕ್’ ಲಸಿಕೆ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ ಎಂದು ಡಾ.ರೆಡ್ಡಿಸ್ ಲ್ಯಾಬೊರೆಟರಿಸ್ ತಿಳಿಸಿದೆ.
ರಷ್ಯಾ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ‘ಸ್ಪುಟ್ನಿಕ್’ ಮಾರಾಟ ಕುರಿತಂತೆ ರಷ್ಯಾದ ಜತೆ ನಾವು ಒಪ್ಪಂದ ಮಾಡಿಕೊಂಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಭಾರತದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಡಾ.ರೆಡ್ಡಿಸ್ ಲ್ಯಾಬೊರೆಟರಿಸ್ ಮತ್ತು ಆರ್’ಡಿಐಎಫ್ ಕಿರಿಲ್ ಡಿಮಿಟ್ರಿವ್ ಎಂಡಿ ಹಾಗೂ ಸಹ ನಿರ್ದೇಶಕ ಜಿವಿ ಪ್ರಸಾದ್ ತಿಳಿಸಿದ್ದಾರೆ.
ಕೊರೋನಾದಿಂದ ಮಕ್ಕಳ ಆರೋಗ್ಯ, ಶೈಕ್ಷಣಿಕ ಪ್ರಗತಿಗೆ ಹಾನಿ
ನಾವು ರಷ್ಯಾದ ಡೆವಲಪ್ ಮೆಂಟ್ ಫಂಡ್ ಜತೆ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದು, ಈ ಲಸಿಕೆ ಮಾರಾಟದ ಒಪ್ಪಿಗೆ ಪಡೆಯಲು ಹಲವಾರು ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸಿವೆ ಎಂದು ಪ್ರಸಾದ್ ಹೇಳಿದ್ದಾರೆ.
ಭಾರತದಲ್ಲಿ ಲಸಿಕೆ ಪ್ರಯೋಗದ ಬಗ್ಗೆ ನಾವು ಅನುಮತಿ ಪಡೆದಿದ್ದೆವು. ಇದರ ವರದಿಗಳನ್ನು ಕಳುಹಿಸಿಕೊಟ್ಟಿದ್ದು, ಶೀಘ್ರದಲ್ಲೇ ಇದರ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.
ಮಾರಕ ಕೊರೋನಾಕ್ಕೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಬಲಿ
ನಿಲ್ಲದ ಕೊರೋನಾ ಅಟ್ಟಹಾಸ; ಮತ್ತೆ 144 ಸೆಕ್ಷನ್ ಜಾರಿ