Thursday, December 9, 2021

ಐವರು ಸಾಧಕರಿಗೆ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ

Follow Us

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ 2019ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಐವರು ಸಾಧಕರಿಗೆ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು 10 ಮಂದಿಗೆ ಸಾಹಿತ್ಯಶ್ರೀ ಪ್ರಶಸ್ತಿ, 19 ಲೇಖಕರಿಗೆ ಪುಸ್ತಕ ಬಹುಮಾನ ಹಾಗೂ 9 ದತ್ತಿನಿಧಿ ಬಹುಮಾನ ಪ್ರಕಟಿಸಲಾಗಿದೆ.
ಗೌರವ ಪ್ರಶಸ್ತಿಗೆ ಪ್ರೊ.ಕೆ.ಜಿ.ನಾಗರಾಜಪ್ಪ(ತುಮಕೂರು), ಬಾಬು ಕೃಷ್ಣಮೂರ್ತಿ(ಬೆಂಗಳೂರು), ಉಷಾ ಪಿ. ರೈ(ಉಡುಪಿ), ಪ್ರೊ.ಲಕ್ಷ್ಮಣ ತೆಲಗಾವಿ (ಚಿತ್ರದುರ್ಗ) ಹಾಗೂ ಡಾ.ವೀರಣ್ಣ ರಾಜೂರ(ಕೊಪ್ಪಳ)ರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಸಾಹಿತ್ಯ ಅಕಾಡೆಮಿಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸಾಹಿತ್ಯಶ್ರೀ ಪ್ರಶಸ್ತಿಗೆ ನಾಲ್ಕು ಪ್ರಕಾರಗಳಲ್ಲಿ ಆಯ್ಕೆ ಮಾಡಲಾಗಿದ್ದು, ಸೃಜನಶೀಲ, ಸೃಜನೇತರ, ಸಾಹಿತ್ಯ ಪರಿಚಾರಕ ಹಾಗೂ ಹೊರನಾಡಿನ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸೃಜಶೀಲ ಸಾಹಿತ್ಯ: ಅಮರೇಶ ನುಗಡೋಣಿ(ರಾಯಚೂರು), ಸುಬ್ಬು ಹೊಲೆಯಾರ್(ಸಕಲೇಶಪುರ), ಎಂ.ಎಸ್.ವೇದಾ(ಮೈಸೂರು), ವಸುಧೇಂದ್ರ(ಬಳ್ಳಾರಿ), ಡಾ.ಜಿ.ಪ್ರಶಾಂತ ನಾಯಕ(ಚಾಮರಾಜನಗರ)ರನ್ನು ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಡಾ.ವಿ.ಎಸ್.ಮಾಳಿ(ಬೆಳಗಾವಿ), ಪ್ರೊ.ಎಫ್.ಟಿ.ಹಳ್ಳೀಕೇರಿ(ಬಳ್ಳಾರಿ), ಡಾ.ಮಾಧವ ಪೆರಾಜೆ(ಕೊಡಗು) ಸೃಜನೇತರ ಸಾಹಿತ್ಯ ಕ್ಷೇತ್ರದ ಸಾಧಕರಾಗಿದ್ದಾರೆ. ಪಿ.ಶಿವಣ್ಣ(ಶಿವಮೊಗ್ಗ)ರನ್ನು ಸಾಹಿತ್ಯ ಪರಿಚಾರಕ ಹಾಗೂ ಡಾ.ಶಾರದ ಕುಪ್ಪಂ(ಬಳ್ಳಾರಿ)ರನ್ನು ಹೊರನಾಡಿನ ಸಾಧಕರೆಂದು ಗುರುತಿಸಿ ಸಾಹಿತ್ಯಶ್ರೀ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
2018ನೇ ಸಾಲಿನ ಪುಸ್ತಕ ಬಹುಮಾನಕ್ಕೆ 19 ಕೃತಿಗಳು ಆಯ್ಕೆ ಮಾಡಲಾಗಿದೆ. ಎಚ್.ಎನ್.ಆರತಿ (ಸ್ಮೋಕಿಂಗ್ ಝೋನ್, ಕಾವ್ಯ), ವಿಲ್ಸನ್ ಕಟೀಲ್ (ನಿಷೇಧಕ್ಕೊಳಪಟ್ಟ ಒಂದು ನೋಟು, ಯುವಕವಿಯ ಪ್ರಥಮ ಸಂಕಲನ), ಕಾ.ತ.ಚಿಕ್ಕಣ್ಣ (ಮಳೆ ಬಯಲು, ಕಾದಂಬರಿ), ಎಸ್.ಗಂಗಾಧರಯ್ಯ (ದೇವರ ಕುದುರೆ, ಸಣ್ಣಕತೆ), ಹೂಲಿ ಶೇಖರ (ಸುಳಿವಾತ್ಮ ಎನ್ನೊಳಗೆ, ನಾಟಕ), ಜಿ.ಕೆ.ರವೀಂದ್ರಕುಮಾರ್ (ತಾರಸಿ ಮಲ್ಹಾರ್, ಲಲಿತ ಪ್ರಬಂಧ), ಪ್ರಸಾದ್ ನಾಯ್ಕ (ಹಾಯ್ ಅಂಗೋಲಾ, ಪ್ರವಾಸ ಸಾಹಿತ್ಯ), ಮ.ಸು.ಮನ್ನಾರ್ ಕೃಷ್ಣರಾವ್ (ಸರ್ಧಾರ್ ವಲ್ಲಭಭಾಯ್ ಪಟೇಲ್, ಜೀವನ ಚರಿತ್ರೆ), ಎಸ್.ಆರ್.ವಿಜಯಶಂಕರ (ವಸುಧಾ ವಲಯ, ಸಾಹಿತ್ಯ ವಿಮರ್ಶೆ), ಪ್ರೊ.ಶಿವರಾಮಯ್ಯ (ಪಂಪಭಾರತ, ಗ್ರಂಥ ಸಂಪಾದನೆ), ಬಸು ಬೇವಿನಗಿಡದ (ಓಡಿ ಹೋದ ಹುಡುಗ, ಮಕ್ಕಳ ಸಾಹಿತ್ಯ), ಸುಧೀಂದ್ರ ಹಾಲ್ದೊಡ್ಡೇರಿ (ಸದ್ದು ಸಂಶೋಧನೆ ನಡೆಯುತ್ತಿದೆ, ವಿಜ್ಞಾನ ಸಾಹಿತ್ಯ), ರವಿ ಹಂಜ್ (ಹುಯೆನ್ ತ್ಸಾಂಗನ ಮಹಾ ಪಯಣ, ಮಾನವಿಕ) -ಡಾ.ಪಂಡಿತ ಕೆ.ರಾಠೋಡ್ (ಕರ್ನಾಟಕದಲ್ಲಿ ಧಾರ್ಮಿಕ ಸಂಘರ್ಷ, ಸಂಶೋಧನೆ), ಎಂ.ಮಾಧವ ಪೈ (ಸಾವಿತ್ರಿ, ಅನುವಾದ-1), ಎನ್.ಶ್ರೀನಾಥ್ (ಕನ್ನಡ ಕಿ ಚರ್ಚಿತ್ ಬೀಸ್ ಕಹಾನಿಯಾ, ಅನುವಾದ-2), ನರೇಂದ್ರ ರೈ ದೇರ್ಲ (ನೆಲಮುಖಿ, ಅಂಕಣ ಬರಹ), ಪುಂಡಲೀಕ ಕಲ್ಲಿಗನೂರು (ಶಿಲ್ಪಕಲಾ ದೇಗುಲಗಳು, ಸಂಕೀರ್ಣ), ಪ್ರೊ.ಕೆ.ಸುಮಿತ್ರಾಬಾಯಿ (ಸೂಲಾಡಿ ಬಂದೋ ತಿರುತಿರುಗೀ, ಲೇಖಕರ ಮೊದಲ ಕೃತಿ) ಅವರ ಕೃತಿಗಳು ಪ್ರಶಸ್ತಿಗೆ ಭಾಜನವಾಗಿವೆ.
ಸ್ಮಿತಾ ಮಾಕಳ್ಳಿ (ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ, ಕಾವ್ಯ), ಡಾ.ಲೋಕೇಶ ಅಗಸನಕಟ್ಟೆ (ಚದುರಂಗ ದತ್ತಿನಿಧಿ, ಕಾದಂಬರಿ), ಚಿದಾನಂದ ಸಾಲಿ (ಇಂದಿರಾ ದತ್ತಿ, ಲಲಿತಾ ಪ್ರಬಂಧ), ಚಂಸು ಪಾಟೀಲ (ಸಿಂಪಿ ಲಿಂಗಣ್ಣ ದತ್ತಿ, ಜೀವನಚರಿತ್ರೆ), ಸುರೇಶ್ ನಾಗಲಮಡಿಕೆ (ಪಿ.ಶ್ರೀನಿವಾಸರಾವ ದತ್ತಿನಿಧಿ, ಸಾಹಿತ್ಯ ವಿಮರ್ಶೆ), ಜಿ.ರಾಮನಾಥ ಭಟ್ (ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿ, ಅನುವಾದ-1), ಡಾ.ಲಕ್ಷ್ಮಣ್ ವಿ.ಎ (ಮಧುರಚೆನ್ನ ದತ್ತಿ, ಲೇಖಕರ ಮೊದಲ ಸ್ವತಂತ್ರ ಕೃತಿ), ಎನ್.ತಿರುಮಲೇಶ್ವರ ಭಟ್ (ಅಮೆರಿಕ ಕನ್ನಡ ದತ್ತಿನಿಧಿ, ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ), ಲಕ್ಷ್ಮೀಶ ತೋಳ್ಪಾಡಿ (ಬಿ.ವಿ.ವೀರಭದ್ರಪ್ಪ ದತ್ತಿನಿಧಿ, ವೈಚಾರಿಕ ಬರಹ) ದತ್ತಿ ಬಹುಮಾನ ಪಡೆದಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!