newsics.com
ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ತನಿಖೆ ಚುರುಕಾಗಿದ್ದು, ನಟಿ ರಾಗಿಣಿ ಹಾಗೂ ಐವರು ಪೆಡ್ಲರ್ ಗಳು ಜೈಲು ಪಾಲಾದ ಬೆನ್ನಲ್ಲೇ ಸಿಸಿಬಿ ನಟಿ ಐಂದ್ರಿತಾ ರೈ ಹಾಗೂ ನಟ ದಿಗಂತ್ ಗೆ ನೋಟಿಸ್ ಜಾರಿ ಮಾಡಿದೆ.
ಬುಧವಾರ 11 ಗಂಟೆಗೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಐಂದ್ರಿತಾ ರೈ ನಟಿ ರಾಗಿಣಿಯ ಆಪ್ತಸ್ನೇಹಿತೆ ಎಂದೇ ಗುರುತಿಸಿಕೊಂಡಿದ್ದು, ಶೇಕ್ ಫಾಜಿಲ್ ಸೇರಿದಂತೆ ಹಲವರು ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಐಂದ್ರಿತಾ ಕೂಡಾ ಭಾಗಿಯಾಗುತ್ತಿದ್ದರು ಎನ್ನಲಾಗಿದೆ.
ಹೀಗಾಗಿ ಸ್ಯಾಂಡಲ್‍ವುಡ್ ನವವಿವಾಹಿತ ತಾರಾ ದಂಪತಿ ಐಂದ್ರಿತಾ ಮತ್ತು ನಟ ದಿಗಂತಗೆ ನೋಟಿಸ್ ಜಾರಿಯಾಗಿದೆ. ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ವಿಚಾರಣೆ ಬಳಿಕ ನಟಿ ಐಂದ್ರಿತಾ ರೈ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಶ್ರೀಲಂಕಾದ ಕ್ಯಾಸಿನೋಗೆ ನಟಿ ಐಂದ್ರಿತಾ ರೈ ಕೂಡ ತೆರಳಿದ್ದರು ಎನ್ನಲಾಗಿದೆ. ಅಲ್ಲದೇ ಫಾಝಿಲ್ ಜೊತೆ ನಟಿ ಐಂದ್ರಿತಾ ಪೋಟೋ ಕೂಡ ಪತ್ತೆಯಾಗಿದೆ.
ಪರಪ್ಪನ ಅಗ್ರಹಾರದಲ್ಲಿರುವ ರಾಗಿಣಿಗೆ ಬೆನ್ನು ನೋವು