ಹೋಬರ್ಟ್: ಇಲ್ಲಿ ನಡೆದ ವನಿತಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ-ನಾದಿಯಾ ಕಿಚೆನಾಕ್ ಜೋಡಿ ಫೈನಲ್ ಪ್ರವೇಶಿಸಿದೆ.
ಶುಕ್ರವಾರ ನಡೆದ ಹೋಬರ್ಟ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ-ನಾದಿಯಾ ಜೋಡಿ ಸ್ಲೊವೇನಿಯಾದ ಟಮಾರಾ ಜಿದಾನ್ಸೆಕ್-ಜೆಕ್ ಗಣರಾಜ್ಯದ ಮೇರಿ ಬೌಜ್ಕೋವಾ ಜೋಡಿಯನ್ನು 7-6 (3), 6-2 ಅಂತರದಿಂದ ಮಣಿಸಿತು.
ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಾನಿಯಾ-ನಾದಿಯಾ ಜೋಡಿ 2ನೇ ಶ್ರೇಯಾಂಕದ ಚೀನೀ ಜೋಡಿಯಾದ ಶುಯಿ ಪೆಂಗ್- ಶುಯಿ ಜಾಂಗ್ ಎದುರು ಪ್ರಶಸ್ತಿ ಸೆಣಸಾಟ ನಡೆಸಲಿದ್ದಾರೆ.
ವನಿತಾ ಫೈನಲ್ಸ್ ಗೆ ಸಾನಿಯಾ-ನಾದಿಯಾ
Follow Us