newsics.com
ಬೆಂಗಳೂರು: ಚಂದನವನದಲ್ಲಿ ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ನಟಿ ಸಂಜನಾ ಅವರ ಆಪ್ತ ಎಂದು ಹೇಳಲಾಗುತ್ತಿರುವ ಜೊಯೆಬ್ ಎಂಬಾತನನ್ನು ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ. ಜೊಯೆಬ್ ಸಹಚರ ಆನಂದ್ ನನ್ನು ಕೂಡ ಸಿಸಿಬಿ ವಿಚಾರಣೆಗೆ ಗುರಿಪಡಿಸಿದೆ.
ಜೊಯೆಬ್ ಸಂಜನಾ ಸೇರಿದಂತೆ ಹಲವರಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಮಧ್ಯೆ ಮಂಗಳೂರು ಸಿಸಿಬಿ ತಂಡ ತಮ್ಮ ತನಿಖೆಯನ್ನು ಮುಂಬೈಗೆ ಕೂಡ ವಿಸ್ತರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡಿದಿರುವ ಯುವತಿಯೊಬ್ಬಳಿಗೆ ಮುಂಬೈ ನಂಟು ಇರುವುದು ಬೆಳಕಿಗೆ ಬಂದಿರು ಕಾರಣ, ಅಲ್ಲಿ ಕೂಡ ತನಿಖೆ ನಡೆಸಲಾಗುತ್ತಿದೆ.