ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿಸಿಎಂ ಜಯಲಲಿತಾ ಆಪ್ತ ಸ್ನೇಹಿತೆ ಶಶಿಕಲಾ ನಟರಾಜನ್ 2021 ರ ಜನವರಿ 27 ರಂದು ಜೈಲಿನಿಂದ ಹೊರಬರಲಿದ್ದು, ಒಂದೊಮ್ಮೆ ದಂಡದ ಮೊತ್ತ 10 ಕೋಟಿ ರೂಪಾಯಿ ನ್ಯಾಯಾಲಯಕ್ಕೆ ಕಟ್ಟದೇ ಹೋದಲ್ಲಿ 2022 ರ ಫೆಬ್ರವರಿಯಲ್ಲಿ ಜೈಲಿನಿಂದ ಮುಕ್ತಿ ಪಡೆಯಲಿದ್ದಾರೆ.
ಫೆಬ್ರವರಿ 15 2017 ರಲ್ಲಿ ಶಶಿಕಲಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಶಶಿಕಲಾ ಅವರ ಜೊತೆ ಅವರ ದತ್ತುಪುತ್ರ ವಿಎನ್ ಸುಧಾಕರನ್, ಜೆ ಇಳವರಸಿ ಕೂಡ ಜೈಲು ಪಾಲಾಗಿದ್ದರು. ತೀರ್ಪಿನ ವೇಳೆ ಶಶಿಕಲಾಗೆ 10 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಈ ದಂಡವನ್ನು ತಮ್ಮ ಶಿಕ್ಷೆಯ ಮುಗಿಯುವ ಸಂದರ್ಭದಲ್ಲಿ ಚೆಕ್ ಅಥವಾ ಡಿಡಿ ಮೂಲಕ ಪಾವತಿಸಬೇಕು. ಈ ಮೊತ್ತಕ್ಕೆ ಆದಾಯ ತೆರಿಗೆ ಇಲಾಕೆಯಿಂದ ಎನ್‍ಓಸಿ ಕೂಡ ಪಡೆಯಬೇಕು. ಒಂದೊಮ್ಮೆ ಶಶಿಕಲಾ ದಂಡ ಕಟ್ಟುವಲ್ಲಿ ವಿಫಲವಾದರೇ ಇನ್ನು ಒಂದು ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಪರಪ್ಪನ ಅಗ್ರಹಾಲ ಜೈಲಿನಲ್ಲಿರುವ ಶಶಿಕಲಾ ಒಮ್ಮೆ ತಮ್ಮ ಪತಿಯ ತೀವ್ರ ಅನಾರೋಗ್ಯದ ಕಾರಣಕ್ಕೆ ಪೆರೋಲ್ ಪಡೆದುಕೊಂಡಿದ್ದರೇ, ಇನ್ನೊಮ್ಮೆ ಪತಿ ನಿಧನದ ವೇಳೆ ಪೆರೋಲ್ ಪಡೆದುಕೊಂಡು ತಮಿಳುನಾಡಿಗೆ ತೆರಳಿ ಪತಿಯ ಅಂತಿಮ ಕಾರ್ಯ ಮುಗಿಸಿ ವಾಪಸ್ಸಾಗಿದ್ದರು.
ಜಯಲಲಿತಾ ಆಪ್ತ ಸ್ನೇಹಿತೆ ರಿಲೀಸ್ ಗೆ ಮುಹೂರ್ತ ಫಿಕ್ಸ್
Follow Us