Wednesday, November 29, 2023

ಫಿಲಂ ಇಂಡಸ್ಟ್ರಿಯ 8 ಉಗ್ರವಾದಕ್ಕೆ ಅಂತ್ಯ ಹಾಡಿ…

Follow Us


ಮುಂಬೈ: ಭಾರತೀಯ ಸಿನಿಮಾ ರಂಗವನ್ನು ಆಳುತ್ತಿರುವ 8 ರೀತಿಯ ಉಗ್ರವಾದವನ್ನು ಕೊನೆಗೊಳಿಸಬೇಕೆಂದು ನಟಿ ಕಂಗನಾ ರನಾವುತ್ ಆಗ್ರಹಿಸಿದ್ದಾರೆ.
ಫಿಲಂ ಇಂಡಸ್ಟ್ರಿಯಲ್ಲಿ ನೆಪೋಟಿಸಂ ಟೆರರಿಸಂ, ಡ್ರಗ್ ಮಾಫಿಯಾ, ಸೆಕ್ಸಿಸಂ, ಧರ್ಮ ಮತ್ತು ಧಾರ್ಮಿಕ ಉಗ್ರವಾದ, ವಿದೇಶ ಸಿನಿಮಾಗಳ ಉಗ್ರವಾದ, ಫೈರಸಿ ಉಗ್ರವಾದ, ಕಾರ್ಮಿಕರನ್ನು ಶೋಷಿಸುವ ಉಗ್ರವಾದ ಹಾಗೂ ಪ್ರತಿಭೆಯನ್ನು ದುರ್ಬಳಕೆ ಮಾಡಿಕೊಳ್ಳುವ ಉಗ್ರವಾದ ಇದೆ. ಇದಕ್ಕೆ ಅಂತ್ಯ ಹಾಡಬೇಕೆಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೋಯ್ಡಾದಲ್ಲಿ ಫಿಲಂ ಸಿಟಿ ನಿರ್ಮಿಸುವ ನಿರ್ಧಾರವನ್ನು ಸ್ವಾಗತಿಸಿ ನಟಿ ಕಂಗನಾ ಸರಣಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿಗೆ ಬರೆದಿರುವ ಪತ್ರವನ್ನು ಟ್ಯಾಗ್ ಮಾಡಿರುವ ಕಂಗನಾ, ಪತ್ರದಲ್ಲಿ ಸಿನಿಮಾಗಳಿಗೆ ದೇಶವನ್ನು ಒಗ್ಗೂಡಿಸುವ ಸಾಮರ್ಥ್ಯವಿದೆ. ಆದರೆ ಈಗ ಒಡೆದಿರುವ ಸಿನಿಮಾ ರಂಗವನ್ನು ಒಂದೆಡೆ ಸೇರಿಸುವ ಅಗತ್ಯವಿದೆ. ಎಲ್ಲರಿಗೂ ಬೇರೆ ಬೇರೆಯಾದ ಪ್ರಸಿದ್ಧಿಇದೆ. ಆದರೆ ಇದನ್ನೆಲ್ಲ ಅಖಂಡ ಭಾರತದ ರೀತಿಯಲ್ಲಿ ಒಗ್ಗೂಡಿಸಿ ಆಗ ನಾವು ವಿಶ್ವದಲ್ಲೇ ನಂಬರ್ ಒನ್ ಸ್ಥಾನಕ್ಕೇರಬಹುದು ಎಂದಿದ್ದಾರೆ.
ಭಾರತದಲ್ಲಿ ಸಿನಿಮಾ ರಂಗ ಪ್ರಾದೇಶಿಕತೆ ಹಾಗೂ ಭಾಷೆ ಆಧಾರದ ಮೇಲೆ ಬೇರೆಯಾಗಿದೆ. ಅವೆಲ್ಲವನ್ನೂ ಒಟ್ಟಾಗಿಸುವ ಇಂಡಿಯನ್ ಫಿಲಂ ಇಂಡಸ್ಟ್ರಿ ಅಗತ್ಯವಿದೆ ಎಂದು ಬಾಲಿವುಡ್ ನಟಿ ಕಂಗನಾ ರನಾವುತ್ ಹೇಳಿದ್ದಾರೆ.
ಬೇರೆ ಬೇರೆ ಅಂಶಗಳಿಗಾಗಿ ಬೇರೆ ಬೇರೆಯಾಗಿ ಗುರುತಿಸಿಕೊಂಡಿರುವ ಭಾರತದ ಎಲ್ಲ ಸಿನಿಮಾ ಇಂಡಸ್ಟ್ರಿಗಳನ್ನು ಒಟ್ಟಿಗೆ ಸೇರಿಸಿ ಕಲೆಕ್ಟಿವ್ ಐಡೆಂಟಿಟಿಯಾಗಿ ಇಂಡಿಯನ್ ಫಿಲಂ ಇಂಡಸ್ಟ್ರಿ ರೂಪಿಸಲು ಪ್ರಧಾನ ಮಂತ್ರಿ ಕಾರ್ಯಾಲಯವನ್ನು ಮನವಿ ಮಾಡುತ್ತೇನೆ ಎಂದಿದ್ದಾರೆ.
ಭಾರತದ ಸಿನಿಮಾ ರಂಗದಲ್ಲಿ ಸಾಕಷ್ಟು ಬದಲಾವಣೆ ಅಗತ್ಯವಿದೆ. ನಾವೆಲ್ಲರೂ ಒಂದೊಂದು ಕಾರಣಕ್ಕೆ ಒಡೆದು ಹೋಗಿರುವುದರಿಂದ ಹಾಲಿವುಡ್ ಸಿನಿಮಾಗಳು ಇದರ ಲಾಭ ಪಡೆದುಕೊಳ್ಳುತ್ತಿವೆ. ಹೀಗಾಗಿ ಇಂಡಿಯನ್ ಫಿಲಂ ಇಂಡಸ್ಟ್ರಿ ಹೆಸರಿನಲ್ಲಿ ಒಂದಾಗಬೇಕು. ಡಬ್ ಮಾಡಲಾದ ಪ್ರಾದೇಶಿಕ ಸಿನಿಮಾಗಳಿಗೆ ಭಾರತದಾದ್ಯಂತ ಪ್ರದರ್ಶನಕ್ಕೆ ಬೆಂಬಲ ಸಿಗುವುದಿಲ್ಲ. ಆದರೆ ಡಬ್ ಮಾಡಲಾದ ಹಾಲಿವುಡ್ ಚಿತ್ರಗಳಿಗೆ ಅಗತ್ಯ ಪ್ರಚಾರ ಸಿಗುತ್ತದೆ. ಕೆಲವೆಡೆ ಹಿಂದಿ ಚಿತ್ರಗಳು ಥಿಯೇಟರ್‍ಗಳ ಮೇಲೆ ಹೊಂದಿರುವ ಸರ್ವಾಧಿಕಾರಿ ಧೋರಣೆಯೂ ಪ್ರಾದೇಶಿಕ ಚಿತ್ರಗಳು ನಿರ್ಲಕ್ಷ್ಯಕ್ಕೊಳಗಾಗುವುದಕ್ಕೆ ಕಾರಣ.
ಎಲ್ಲರ ಮನಸ್ಸಿನಲ್ಲಿಯೂ ಹಿಂದಿ ಚಿತ್ರರಂಗವೇ ಭಾರತದ ದೊಡ್ಡ ಚಿತ್ರರಂಗ ಎಂಬ ಭಾವನೆ ಇದೆ. ಆದರೆ ತೆಲುಗು ಚಿತ್ರರಂಗ ಅತ್ಯಂತ ಮೇಲ್ಮಟ್ಟದಲ್ಲಿದೆ ಹಾಗೂ ಬಹುಭಾಷೆಗಳಲ್ಲಿ ಸಿನಿಮಾ ನಿರ್ಮಿಸುತ್ತಿದೆ. ಎಷ್ಟೋ ಹಿಂದಿ ಸಿನಿಮಾಗಳು ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣಗೊಳ್ಳುತ್ತವೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ

ಮತ್ತಷ್ಟು ಸುದ್ದಿಗಳು

vertical

Latest News

ಮೈಸೂರು ವಿವಿ ಪ್ರೊಫೆಸರ್ ವಿರುದ್ಧ ಪಿಎಚ್ಡಿ ವಿದ್ಯಾರ್ಥಿನಿಯಿಂದ ಪೊಲೀಸರಿಗೆ ದೂರು: FIR ದಾಖಲು

newsics.com ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಶುಭ ಗೋಪಾಲ್ ವಿರುದ್ಧ ಪಿಎಚ್.ಡಿ. ವಿದ್ಯಾರ್ಥಿನಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು ವಿವಿಯ ಮೈಕ್ರೋ ಬಯಾಲಜಿ ವಿಭಾಗದ ಪ್ರೊ.ಶುಭ ಗೋಪಾಲ್ ವಿರುದ್ಧ...

ಮುಂದಿನ ವರ್ಷದಿಂದ 500 ರಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭ: ಮಧು ಬಂಗಾರಪ್ಪ

newsics.com ಹಾಸನ: ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 ರಿಂದ 600 ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದು, ಶಾಲೆಗಳ ಅಭಿವೃದ್ಧಿಗೂ ಹಾಗೂ ಗ್ಯಾರಂಟಿಗೂ ಯಾವ ಸಂಬಂಧವಿಲ್ಲ ಎಂದು...

2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

newsics.com ಬೆಂಗಳೂರು: 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿದಂತೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಹೀಗಿದೆ. ಜನವರಿ 15,...
- Advertisement -
error: Content is protected !!