Saturday, February 27, 2021

ಜ.1ರಿಂದಲೇ ಶಾಲಾ ಕಾಲೇಜು ಆರಂಭ; ಮಾರ್ಗಸೂಚಿ ಬಿಡುಗಡೆ

newsics.com
ಬೆಂಗಳೂರು: ರೂಪಾಂತರಗೊಂಡ ವೈರಸ್ ಭೀತಿ ನಡುವೆಯೂ ರಾಜ್ಯದಲ್ಲಿ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಜನವರಿ 1 ರಿಂದ ದ್ವಿತೀಯ ಪಿಯುಸಿ ತರಗತಿಗಳು ಶುರುವಾಗಲಿವೆ. ಹೀಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.
ಬ್ರಿಟನ್ ವೈರಸ್ ಮಧ್ಯೆ ಕರ್ನಾಟಕದಲ್ಲಿ ಶಾಲೆ ಆರಂಭವಾಗುತ್ತಾ..? ಸರ್ಕಾರದ ನಡೆ ಏನು?
ಮಾರ್ಗಸೂಚಿ:
ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ದಿನಪೂರ್ತಿ ತರಗತಿ ಇರಲ್ಲ. 45 ನಿಮಿಷಗಳ, 4 ತರಗತಿಗಳನ್ನು ಮಾತ್ರ ಪ್ರತಿದಿನ ನಡೆಸಬೇಕು. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಇಲ್ಲ. ಒಂದು ಕೊಠಡಿಯಲ್ಲಿ ಕೇವಲ 15 ವಿದ್ಯಾರ್ಥಿಗಳಿಗೆ ಮಾತ್ರ ಪಾಠ
ಕೋವಿಡ್ ಹಿನ್ನೆಲೆ ಸಿಬ್ಬದಿಗೆ ಬಯೋಮೆಟ್ರಿಕ್ ಹಾಜರಾತಿ ಇಲ್ಲ. ಕಾಲೇಜುಗಳಲ್ಲಿ ಸಾಮೂಹಿಕ ಪ್ರಾರ್ಥನೆ , ಕ್ರೀಡೆ ನಿಷೇಧ. 51 ವರ್ಷ ಮೇಲ್ಪಟ್ಟ ಸಿಬ್ಬಂದಿ ಮಾಸ್ಕ್ ಜತೆಗೆ ಫೇಸ್ ಶೀಲ್ಡ್ ಬಳಕೆ ಕಡ್ಡಾಯ.

ಮತ್ತಷ್ಟು ಸುದ್ದಿಗಳು

Latest News

ಗ್ಯಾಸ್ ಟ್ಯಾಂಕರ್- ಡೀಸೆಲ್ ಟ್ಯಾಂಕರ್ ಡಿಕ್ಕಿ: ತಪ್ಪಿದ ಅನಾಹುತ

newsics.com ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಹೊಸ ಮಜಲು ಎಂಬಲ್ಲಿ ಅನಿಲ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅನಿಲ...

ಸಹೋದರಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚೂರಿಯಿಂದ ಇರಿತ

Newsics.com ನವದೆಹಲಿ: ಸಹೋದರಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ 17 ವರ್ಷ ಪ್ರಾಯದ ಹುಡುಗನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಗಂಭೀರ ಹಲ್ಲೆ ನಡೆಸಿದ್ದಾರೆ. ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಬಾಲಕನ ಸ್ಥಿತಿ ಅತ್ಯಂತ...

20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕ ಅಮಾನತು

newsics.com ಕೊಚ್ಚಿ: ಕೇರಳದ ದೇವಸ್ಥಾನವೊಂದರಲ್ಲಿ 20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕರೊಬ್ಬರನ್ನು ಅಮಾನತು ಮಾಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿಯ ನೀತಿಗೆ  ವಿರುದ್ದವಾಗಿ ಅರ್ಚಕರು ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕೊಚ್ಚಿ ಸಮೀಪದ ಮಾಚಾಡ್ ತಿರುವಣ್ಣಿಕಾವ್ ದೇವಸ್ಥಾನದಲ್ಲಿ...
- Advertisement -
error: Content is protected !!