Friday, May 20, 2022

ರಾಜ್ಯದಲ್ಲಿ ನವೆಂಬರ್’ವರೆಗೂ ಶಾಲೆ ಆರಂಭ ಸಾಧ್ಯತೆಯೇ ಇಲ್ಲ

Follow Us

♦ ಶಾಲೆ ಆರಂಭಕ್ಕೆ ಬಹುತೇಕ ಶಾಸಕರ ಒಲವಿಲ್ಲ

newsics.com
ಬೆಂಗಳೂರು/ಬೀದರ್: ರಾಜ್ಯದಲ್ಲಿ ನವೆಂಬರ್’ವರೆಗೂ ಶಾಲೆ ಆರಂಭವಾಗುವ ಸಾಧ್ಯತೆಯೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್ ಸುಳಿವು ನೀಡಿದ್ದಾರೆ.
ಶಾಲೆ ಆರಂಭಿಸುವ ಬಗ್ಗೆ ಸರ್ಕಾರಕ್ಕೆ ಯಾವುದೇ ಧಾವಂತ ಇಲ್ಲ. 40ಕ್ಕೂ ಹೆಚ್ಚು ಶಾಸಕರನ್ನು ಭೇಟಿ ಮಾಡಿ ಶಾಲೆ ಆರಂಭ ವಿಚಾರದಲ್ಲಿ ಸಲಹೆ ಪಡೆದಿದ್ದೇನೆ. ಬಹುತೇಕ ಶಾಸಕರೂ ಶಾಲೆ ಆರಂಭಕ್ಕೆ ಒಲವು ತೋರಿಲ್ಲ. ಹೀಗಾಗಿ ಸದ್ಯಕ್ಕಂತೂ ಶಾಲೆ ತೆರೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಶಾಲೆ ಆರಂಭವಾಗುವ ಹದಿನೈದು ದಿನಗಳ ಮುಂಚೆಯೇ ಖುದ್ದಾಗಿ ತಾವೇ ತಿಳಿಸುವುದಾಗಿ ಸುರೇಶಕುಮಾರ್ ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಈ ವೇಳೆ ಶಾಲೆ ತೆರೆಯುವ ಯಾವ ದುಸ್ಸಾಹಸವನ್ನೂ ಮಾಡುವುದಿಲ್ಲ. ಆದರೆ, ಶಾಲೆ ತೆರೆಯಲು ಬೇಕಾದ ಪೂರ್ವ ಸಿದ್ಧತೆಗಳನ್ನು ಶಿಕ್ಷಣ ಇಲಾಖೆ ಕಾಲ ಕಾಲಕ್ಕೆ ಮಾಡುತ್ತಿರುತ್ತದೆ. ಅಂದ ಮಾತ್ರಕ್ಕೆ ಶಾಲೆ ಆರಂಭಿಸುತ್ತೇವೆ ಎಂದು ಅರ್ಥವಲ್ಲ ಎಂದು ಸುರೇಶಕುಮಾರ್ ಸಮಜಾಯಿಷಿ ನೀಡಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ರಾಜ್ಯದಲ್ಲಿ ಸದ್ಯಕ್ಕಿಲ್ಲ ಶಾಲಾ ಕಾಲೇಜು ಆರಂಭ

ಶಿಕ್ಷಣ ಸಚಿವರ ಪತ್ರಕ್ಕೆ ಶೆಟ್ಟರ್ ಅಪಸ್ವರ
ಈ ಮಧ್ಯೆ, ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಸಚಿವ, ಶಾಸಕರಿಗೆ ಪತ್ರ ಬರೆದಿರುವ ಸಚಿವ ಸುರೇಶಕುಮಾರ್ ಅವರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಸಚಿವರು, ಶಾಸಕರು ಎಲ್ಲರೂ ಅಧಿವೇಶನದಲ್ಲೇ ಇದ್ದಿದ್ದು, ಆಗ ಸಲಹೆ ಕೇಳುವ ಬದಲು ಈಗ ಪತ್ರ ಬರೆದರೆ ಏನು ಪ್ರಯೋಜನ ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ. ಇಷ್ಟು ದಿನ ನಾವು ಅಧಿವೇಶನದಲ್ಲಿ ಇದ್ದೆವು. ಅಲ್ಲಿಯೆ ಚರ್ಚಿಸಬಹುದಿತ್ತು. ಆದರೆ ಈಗ ಪತ್ರ ಬರೆದರೆ ಏನ್ ಹೇಳೋದು ಎಂದು ಶಿಕ್ಷಣ ಸಚಿವರ ಪತ್ರ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿದರು.
ಏಕಾಏಕಿ ಶಾಲೆ ಆರಂಭಿಸುವುದು ಬೇಡ ಎಂದ ಶೆಟ್ಟರ್, ಬದಲಿಗೆ ಪ್ರಯೋಗಿಕವಾಗಿ ಶಾಲೆ ಆರಂಭಿಸಿ ನೋಡಲಿ ಎಂದು ಶಿಕ್ಷಣ ಸಚಿವರಿಗೆ ಸಲಹೆ ನೀಡಿದ್ದಾರೆ. ಮೊದಲ ಹಂತದಲ್ಲಿ ಮೂರ್ನಾಲ್ಕು ಶಾಲೆಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಿ. ಈ ಮೂಲಕ ಇದರ ಸಾಧಕ-ಬಾಧಕಗಳನ್ನು ನೋಡಿಕೊಂಡ ಬಳಿಕ ಇತರೆ ಶಾಲೆಗಳನ್ನು ಪ್ರಾರಂಭಿಸಬಹುದು ಎಂದು ಸಲಹೆ ನೀಡಿದರು.
ಸಚಿವ ಎಸ್ ಟಿ ಸೋಮಶೇಖರ್ ಕೂಡ ತಕ್ಷಣ ಶಾಲೆ ತೆರೆಯುವ ಬಗ್ಗೆ ಮನಸ್ಸು ಮಾಡಿಲ್ಲ. ಶಾಲೆ ತೆರೆಯುವ ಕುರಿತು ನಮಗೂ ಪತ್ರ ಸಿಕ್ಕಿದೆ. ಎರಡು ದಿನ ನಾನು ನಮ್ಮ ಕ್ಷೇತ್ರದ ನಾಯಕ ಜತೆಗೆ ಸಭೆ ಮಾಡುತ್ತೇನೆ. ಕೆಲ ಸಮಯದ ನಂತರ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಶಾಲೆ ತೆರೆಯುವ ಬಗ್ಗೆ ಯೋಚನೆ ಮಾಡಬೇಕು ಎಂದರು.

ಅಕ್ಟೋಬರ್ 28ಕ್ಕೆ ವಿಧಾನಪರಿಷತ್ ನಾಲ್ಕು ಸ್ಥಾನಗಳಿಗೆ ಚುನಾವಣೆ

ಚೀನಾ ಗಡಿಯಲ್ಲಿ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿ ನಿಯೋಜನೆ

ಶಿರಾ, ಆರ್ ಆರ್ ನಗರ ಉಪ ಚುನಾವಣಾ ದಿನಾಂಕ ಘೋಷಣೆ

ಪುರಿ ಜಗನ್ನಾಥ ಮಂದಿರದ 351 ಸೇವಕರು, 53 ಸಿಬ್ಬಂದಿಗೆ ಕೊರೋನಾ, ಮೂವರ ಸಾವು

ಮತ್ತಷ್ಟು ಸುದ್ದಿಗಳು

Latest News

ಮತ್ತೆ ಚಿನ್ನ, ಬೆಳ್ಳಿ ದುಬಾರಿ

newsics.com ಬೆಂಗಳೂರು: ಶುಕ್ರವಾರ (ಮೇ 20) ಚಿನ್ನ, ಬೆಳ್ಳಿ ಮತ್ತೆ ದುಬಾರಿಯಾಗಿದೆ. 10 ಗ್ರಾಂ ಚಿನ್ನಕ್ಕೆ 640 ರೂ. ಹೆಚ್ಚಳವಾಗಿದೆ. ಬೆಳ್ಳಿ 1 ಕೆಜಿಗೆ ಬರೋಬ್ಬರಿ 900...

ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಸಾಧ್ಯತೆ

newsics.com ಬೆಂಗಳೂರು: ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ‌ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ನಾಗೇಶ್, ದ್ವಿತೀಯ ಪಿಯು...

ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡದಲ್ಲಿ ಮಾತನಾಡಿದ ಸಂಸದ ಚಂದ್ರ ಆರ್ಯ

newsics.com ಕೆನಡಾ: ಕೆನಡಾ ಪಾರ್ಲಿಮೆಂಟ್ ನಲ್ಲಿ ಸಂಸದ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿದ್ದು, ಇದೇ ಮೊದಲ ಬಾರಿಗೆ ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡದ ಕಹಳೆ ಮೊಳಗಿದೆ. ನಾನು ನನ್ನ ಮಾತೃ ಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದ...
- Advertisement -
error: Content is protected !!