Tuesday, July 5, 2022

ಹಿರಿಯ ಚಿಂತಕ, ಲೇಖಕ ಡಿ.ಎಸ್. ನಾಗಭೂಷಣ್ ಇನ್ನಿಲ್ಲ

Follow Us

newsics.com
ಶಿವಮೊಗ್ಗ: ಸಮಾಜವಾದಿ ಚಿಂತಕ, ಲೇಖಕ, ಆಕಾಶವಾಣಿ ವಾರ್ತಾವಾಚಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್. ನಾಗಭೂಷಣ್ ಬುಧವಾರ ರಾತ್ರಿ (ಮೇ 18) ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಅವರು ಅಸ್ವಸ್ಥರಾಗಿದ್ದರು. ಓದು, ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಅವರು ತಮ್ಮ ಪತ್ನಿ ಸವಿತಾ ನಾಗಭೂಷಣ್ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದರು.
ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆಗೆ ಕಾರ್ಯನಿರ್ವಹಿಸಿದ್ದ ಅವರು, ನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿಯೂ 7 ವರ್ಷ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು.
ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಿ.ಎಸ್.ನಾಗಭೂಷಣ್ 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದ್ದರು.
ಅವರ ‘ಗಾಂಧಿ ಕಥನ’ ಕೃತಿಗೆ 2021ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ‌ ಪುರಸ್ಕಾರ ಲಭಿಸಿತ್ತು. ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ’, ‘ನಮ್ಮ ಶಾಮಣ್ಣ’, ‘ಕನ್ನಡದ ಮನಸು ಮತ್ತು ಇತರ ಲೇಖನಗಳು’. ಹಾಗೂ ‘ಕಾಲಕ್ರಮ’, ‘ಗಮನ’, ‘ಅನೇಕ’, ‘ಈ ಭೂಮಿಯಿಂದ ಆ ಆಕಾಶದವರೆಗೆ’, ‘ಮರಳಿ ಬರಲಿದೆ ಸಮಾಜವಾದ’, ‘ವಸಿಷ್ಠರು ಮತ್ತು ವಾಲ್ಮೀಕಿಯರು’, ‘ಹಣತೆ’(ಜಿಎಸ್ಸೆಸ್ ಅಭಿನಂದನೆ ಗ್ರಂಥ) ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದರು.

ಐಪಿಎಲ್: ಡಿ ಕಾಕ್ ದಾಖಲೆ, ಲಕ್ನೋ ತಂಡಕ್ಕೆ ಸೂಪರ್ ಗೆಲುವು

ಆರ್ಥಿಕ ಸಂಕಷ್ಟ: Edtech ಯುನಿಕಾರ್ನ್ ವೇದಾಂತು ಸಂಸ್ಥೆಯ 424 ಉದ್ಯೋಗಿಗಳಿಗೆ ಗೇಟ್ ಪಾಸ್

ಭದ್ರತಾ ಸಿಬ್ಬಂದಿಯ ನೆರವಿಲ್ಲದೆ ತಾಜ್ ಹೋಟೆಲಿಗೆ ಆಗಮಿಸಿದ ರತನ್ ಟಾಟಾ 

ತೈಲ ಸೋರಿಕೆಯಿಂದಾಗಿ ಕಪ್ಪಾದ ಗೋವಾ ಬೀಚ್

ಮತ್ತಷ್ಟು ಸುದ್ದಿಗಳು

vertical

Latest News

ಚಂದ್ರಶೇಖರ್​ ಗುರೂಜಿ ಸಾವಿನ ಹಿಂದೆ ಹೆಣ್ಣಿನ ಕರಿ ನೆರಳು..?

newsics.com ಹುಬ್ಬಳ್ಳಿ :  ಹುಬ್ಬಳ್ಳಿಯಲ್ಲಿ ಸರಳ ವಾಸ್ತು ತಜ್ಞ ಚಂದ್ರಶೇಖರ್​​ ಕೊಲೆ ಸಾಕಷ್ಟು ಆಯಾಮಗಳನ್ನು ಪಡೆದುಕೊಳ್ತಿದೆ. ಗುರೂಜಿಗಳ ಸಾವಿನ ಹಿಂದೆ ಭಕ್ತರು ಇದ್ದಾರಾ ಅಥವಾ ಆಪ್ತರೇ ಚಂದ್ರ...

ಚಂದ್ರಶೇಖರ್ ಗುರೂಜಿ ಆಪ್ತರಿಂದಲೇ ನಡೆಯಿತಾ ಕೊಲೆ ?

newsics.com ಹುಬ್ಬಳ್ಳಿ : ಸರಳ ವಾಸ್ತು ಚಂದ್ರಶೇಖರ್​ ಗುರೂಜಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಚಂದ್ರಶೇಖರ್​ ಗುರೂಜಿ ಹತ್ಯೆ ಮಾಡಿದವರು ಅವರ ಆಪ್ತರೇ ಎಂಬ ಮಾಹಿತಿ ಮೇಲ್ನೋಟಕ್ಕೆ...

ಕಾಲಿಗೆ ನಮಸ್ಕಾರ ಮಾಡುವ ನಾಟಕ: ಚಂದ್ರಶೇಖರ್ ಗುರೂಜಿಗೆ 70 ಬಾರಿ ಇರಿದ ದುಷ್ಕರ್ಮಿಗಳು

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಮೇಲೆ ದುಷ್ಕರ್ಮಿಗಳು 70 ಬಾರಿ ಇರಿದು ಹತ್ಯೆ ಮಾಡಿದ್ದಾರೆ.  ಅತ್ಯಂತ ಭೀಕರವಾಗಿ ಚುಚ್ಚಿ ಚುಚ್ಚಿ ಹತ್ಯೆ ಮಾಡಲಾಗಿದೆ. ಇಬ್ಬರು ದುಷ್ಕರ್ಮಿಗಳು ಎಸಗಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಂದ್ರಶೇಖರ್...
- Advertisement -
error: Content is protected !!