ಕಲಬುರ್ಗಿ: ರಾಜ್ಯದ ಕಲಬುರ್ಗಿ ಬಳಿ ಭೀಕರ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದಾರೆ ಇದರಲ್ಲಿ ನಾಲ್ಕು ಮಂದಿ ಮಹಿಳೆಯರು ಮತ್ತು ಮೂವರು ಪುರುಷರಾಗಿದ್ದಾರೆ. ಕಲಬುರ್ಗಿ ಸಮೀಪದ ಸಾವಳಗಿ ಬಳಿ ಈ ದುರಂತ ಸಂಭವಿಸಿದೆ
ಮೃತಪಟ್ಟವರಲ್ಲಿ ಗರ್ಭಿಣಿ ಕೂಡ ಸೇರಿದ್ದಾರೆ.
ಇಂದು ಮುಂಜಾನೆ ಈ ದುರಂತ ಸಂಭವಿಸಿದೆ. ಮೃತಪಟ್ಟವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ.