ಜಿನೀವ (ಸ್ವಿಟ್ಜರ್ ಲ್ಯಾಂಡ್): 2020ರಲ್ಲೂ ತೀವ್ರ ಹವಾಮಾನ ವೈಪರೀತ್ಯಗಳು ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆ ಹವಾಮಾನ ಸಂಘಟನೆ ತಿಳಿಸಿದೆ.
ಹವಾಮಾನ ಮತ್ತು ಪರಿಸರ ಸಂಬಂಧಿ ವಿಪತ್ತುಗಳು 2020 ರಲ್ಲಿ ಮುಂದುವರಿಯಲಿವೆ ಎಂದು ವಿಶ್ವಸಂಸ್ಥೆ ಹೇಳಿದೆ. ಹೆಚ್ಚುತ್ತಿರುವ ತಾಪಮಾನ ತೀವ್ರ ರೀತಿಯ ಹವಾಮಾನ ವೈಪರೀತ್ಯಗಳಿಗೆ ಸಂಬಂಧಿಸಿದ ದುರಂತಗಳನ್ನು ಸೃಷ್ಟಿಸಲಿದೆ. ಕರಗುತ್ತಿರುವ ಹಿಮ, ದಾಖಲೆಯ ಸಮುದ್ರ ಮಟ್ಟಗಳು, ಹೆಚ್ಚುತ್ತಿರುವ ಸಾಗರ ಉಷ್ಣತೆ ಮತ್ತು ಆಮ್ಲೀಯತೆ ಹಾಗೂ ವಿಕ್ಷಿಪ್ತ ಹವಾಮಾನ ತಾಪಮಾನದಲ್ಲಿನ ಬದಲಾವಣೆಗಳೇ ಆಗಿವೆ ಎಂದು ಹವಾಮಾನ ಸಂಘಟನೆ ಆತಂಕ ವ್ಯಕ್ತಪಡಿಸಿದೆ.
2020ರಲ್ಲೂ ತೀವ್ರ ಹವಾಮಾನ ವೈಪರೀತ್ಯ
Follow Us