ಮಲಪ್ಪುರಂ: ಕಲ್ಲಿಕೋಟೆಯ ಕಡಲುಂಡಿ ಮೂಲದ ಶಬಾನಾ ಸುಲೈಮಾನ್ (27) ಆನೆಗಳಿಗೆ ತರಬೇತಿ ನೀಡುವ ಮಾವುತರಾಗಲಿದ್ದಾರೆ. ಈ ಮೂಲಕ ಅವರು ಕೇರಳದ ಮೊದಲ ಮುಸ್ಲಿಂ ಮಹಿಳಾ ಮಾವುತ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಶಬಾನಾ ಸುಲೈಮಾನ್, ದುಬೈನಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ.
ಮನಿಶೆರಿ ರಾಜೇಂದ್ರ ಎಂಬ ಹೆಸರಿನ ಆನೆಯನ್ನು ಶಬಾನಾ ಸುಲೈಮಾನ್ ನಿಯಂತ್ರಿಸುತ್ತಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಓಟ್ಟಪ್ಪಾಲಂ ಸಮೀಪ ಇರುವ ವರಿಕ್ಕಶೆರಿ ಮನಾದಲ್ಲಿ ಈ ತರಬೇತಿ ನಡೆದಿದೆ. ಆನೆಯ ತರಬೇತಿ ಬಗ್ಗೆ ಮನಿಶೆರಿ ಹರಿದಾಸ್ ಎಂಬುವರ ಬಳಿ ಆಸಕ್ತಿ ತೋರಿದರು. 3 ಆನೆಗಳ ಮಾಲೀಕರಾಗಿರುವ ಅವರು ಶಬಾನಾರ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಬೆಂಬಲ-ತರಬೇತಿ ನೀಡಿದರು.
ದೇಗುಲಗಳಲ್ಲಿ ಉತ್ಸವಗಳ ವೇಳೆ ಆನೆಗಳನ್ನು ನಿಭಾಯಿಸುವುದರ ಬಗ್ಗೆ ತರಬೇತಿ ಪಡೆಯಲಿದ್ದೇನೆ. ಇಂಥ ಅವಕಾಶಗಳಿಗಾಗಿ ನಿರೀಕ್ಷೆಯಲ್ಲಿದ್ದೇನೆ ಎಂದು ಸುಲೈಮಾನ್ ಹೇಳಿದ್ದಾರೆ.
ಶಬಾನಾ ಸುಲೈಮಾನ್, ಕೇರಳದ ಮೊದಲ ಮುಸ್ಲಿಂ ಮಹಿಳಾ ಮಾವುತ
Follow Us