Saturday, January 23, 2021

ಈಕೆ 13 ವರ್ಷದ ಬಾಲಕಿ; 12 ಕಾದಂಬರಿ ಬರೆದ ಸಾಧಕಿ!

newsics.com
ಕಾಸರಗೋಡು: ಈ ಬಾಲಕಿಯ ವಯಸ್ಸು 13 ವರ್ಷ. ಆಗಲೇ ಈಕೆ 12 ಕಾದಂಬರಿ ಬರೆದಿದ್ದಾಳೆ.
ಅಚ್ಚರಿಯೆನಿಸುವ ಈ ಸಾಧನೆಯನ್ನು ಕಾಸರಗೋಡಿನ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಿನಾಶಾ ಸಾಧ್ಯವಾಗಿಸಿದ್ದಾಳೆ.
ಮೊದಲ ತರಗತಿಯಲ್ಲಿದ್ದಾಗಲೇ ತನ್ನ ವೈಯಕ್ತಿಕ ದಿನಚರಿಯಲ್ಲಿ ಜರ್ನಲಿಂಗ್ ಆರಂಭಿಸಿದ ಸಿನಾಶಾ, 8ನೇ ತರಗತಿಗೇ ಸಂಪೂರ್ಣ ಕಾದಂಬರಿಗಾರ್ತಿಯಾಗಿಬಿಟ್ಟಿದ್ದಾಳೆ.
ಸಿನಾಶಾ ಕೃತಿಗಳಾದ ತಲಿರಿಲಾಯಂ ಒರುತುಳ್ಳಿ ನೀಲವಂ, ಪೂವಿಯೂಣ್ಣ ಇಲಚಾರ್ತುಕಲ್, ಕಡಲಿಂಡೆ ರಹಸ್ಯಂ, ಎ ಗರ್ಲ್ ಅಂಡ್ ದಿ ಟೈಗರ್ಸ್, ಮಿಸ್ಟೀರಿಯಸ್ ಫಾರೆಸ್ಟ್ ಮತ್ತು ಸಾಂಗ್ ಆಫ್ ದಿ ರಿವರ್ ಈಗಾಗಲೇ ಮುದ್ರಿತವಾಗಿದೆ. ಇಂಗ್ಲಿಷ್ ಭಾಷೆಯಲ್ಲೂ ತಮ್ಮ ಚೊಚ್ಚಲ ಪದ್ಯ ಮುಗಿಸಿದ್ದಾರೆ.
ಸಿನಾಶಾ ಅವರ ತಂದೆ ಎ.ಶ್ರೀಕುಮಾರ್ ವೃತ್ತಿಯಲ್ಲಿ ಶಿಕ್ಷಕರು. ಮಗಳ ಸಾಧನೆ ಅವರಿಗೆ ಹೆಮ್ಮೆ ತರಿಸಿದೆ. ಕಾದಂಬರಿಗಳಲ್ಲಿ ಅವಳ ಕನಸುಗಳು ಮತ್ತು ಪಾತ್ರಗಳೇ ತುಂಬಿವೆ. ಬರವಣಿಗೆಯ ಜತೆಗೆ ಚಿತ್ರಕಲೆಯ ಬಗ್ಗೆಯೂ ಹೆಚ್ಚು ಒಲವು ಹೊಂದಿರುವ ಸಿನಾಶಾ, ತನ್ನ ಕಾದಂಬರಿಗಳಿಗೆ ತಾನೇ ಮುಖಪುಟ ಚಿತ್ರಿಸಿದ್ದಾಳೆ.
ಸಿನಾಶ ಈಗ ಮೂರು ಕಾದಂಬರಿ ರಚನೆಯಲ್ಲಿ (ಒಂದು ಮಲಯಾಳಂ ಮತ್ತು ಎರಡು ಇಂಗ್ಲಿಷ್) ತೊಡಗಿಸಿಕೊಂಡಿದ್ದಾಳೆ.

ಮತ್ತಷ್ಟು ಸುದ್ದಿಗಳು

Latest News

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು,...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...

ಶಿವಮೊಗ್ಗ ದುರಂತ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Newsics.com ಬೆಂಗಳೂರು: ದೇಶವನ್ನು ನಡುಗಿಸಿರುವ ಶಿವಮೊಗ್ಗ ಸಮೀಪದ  ಹುಣಸೋಡು ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಶಿವಮೊಗ್ಗ ನಗರದಿಂದ ಕೇವಲ ಎಂಟು ಕಿಲೋ...
- Advertisement -
error: Content is protected !!