ಶಿರಡಿ: ಇಲ್ಲಿನ ಪ್ರಸಿದ್ಧ ಸಾಯಿಬಾಬಾ ದೇವಸ್ಥಾನ ಭಾನುವಾರದಿಂದ (ಜ.19) ಅನಿರ್ದಿಷ್ಟಾವಧಿವರೆಗೆ ಬಂದ್ ಆಗಲಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಸಾಯಿಬಾಬಾ ಅವರ ಹುಟ್ಟಿದ ಸ್ಥಳ ಪರ್ಭಾನಿಯ ಪತ್ರಿ ಎಂದು ನೀಡಿರುವ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಈ ಹೇಳಿಕೆ ಹಿನ್ನೆಲೆಯಲ್ಲಿ ಸಾಯಿಬಾಬಾ ಸಮಾಧಿ ಆಡಳಿತ ಮಂಡಳಿ ಸಿಎಂ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ಜನವರಿ 19 ರಿಂದ ಅನಿರ್ದಿಷ್ಠಾವಧಿವರೆಗೆ ಬಂದ್ ಗೆ ಕರೆನೀಡಿದೆ.
ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳವಾಗಿರುವುದರಿಂದ ಅದನ್ನು ಧಾರ್ಮಿಕ ಪ್ರವಾಸೋದ್ಯಮದ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಉದ್ಧವ್ ಠಾಕ್ರೆ ಹೇಳಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ನಾಳೆಯಿಂದ ಶಿರಡಿಯ ಸಾಯಿಬಾಬಾ ಮಂದಿರ ಅನಿರ್ದಿಷ್ಟಾವಧಿ ಬಂದ್
Follow Us