newsics.com
ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ವಿರೋಧಿಸಿ ಶಿರೋಮಣಿ ಅಕಾಲಿದಳ ಬಿಜೆಪಿ ಮೈತ್ರಿ ತೊರೆದು ಎನ್ಡಿಎ ಒಕ್ಕೂಟದಿಂದ ನಿರ್ಗಮಿಸಿದೆ.
ಕೃಷಿ ಮಸೂದೆಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳ ಎನ್ಡಿಎಯಿಂದ ಹೊರಬಂದಿದೆ ಎಂದು ಪಕ್ಷದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಎಂಎಸ್ಪಿಯಲ್ಲಿ ರೈತರ ಬೆಳೆಗಳ ಮಾರಾಟವನ್ನು ರಕ್ಷಿಸಲು ಶಾಸನಬದ್ಧ ಶಾಸಕಾಂಗ ಖಾತರಿಗಳನ್ನು ನೀಡಲು ಸಾಧ್ಯವಿಲ್ಲ ಎಂಬ ಕೇಂದ್ರದ ಹಠಮಾರಿ ಧೋರಣೆ ಮತ್ತು ಪಂಜಾಬಿ ಮತ್ತು ಸಿಖ್ ಸಮಸ್ಯೆಗಳ ಬಗ್ಗೆ ಅದರ ನಿರಂತರ ನಿರ್ಲಕ್ಷ್ಯದ ಕಾರಣ ನಾವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್’ಡಿಎ) ವನ್ನು ತೊರೆದಿದ್ದೇವೆ ಎಂದು ಎಸ್ಎಡಿ ಹೇಳಿದೆ.
ಮೂರು ವಿವಾದಿತ ಮಸೂದೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸೆ.17ರಂದು ಶಿರೋಮಣಿ ಅಕಾಲಿ ದಳದ ಸದಸ್ಯೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು