Tuesday, October 4, 2022

ಸರಳ ಜಂಬೂಸವಾರಿ; ಗಾಂಭೀರ್ಯದ ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು

Follow Us

newsics.com
ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವವಿಖ್ಯಾತ ಮೈಸೂರು ಜಂಬೂಸವಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಚಾಲನೆ ನೀಡಿದರು.
750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದಾಗ ಅಲ್ಲಿದ್ದ ಜನರು ಪುಳಕಗೊಂಡರು. ಅಂಬಾರಿ ವೇದಿಕೆ ಬಳಿ ಬಂದಾಗ ಚಾಮುಂಡೇಶ್ವರಿಗೆ ಸಿಎಂ ಯಡಿಯೂರಪ್ಪ ಪುಷ್ಪಾರ್ಚನೆ ಮಾಡಿದರು. ಅಭಿಮನ್ಯುಗೆ ವಿಜಯ ಮತ್ತು ಕಾವೇರಿ ಆನೆಗಳು ಸಾಥ್ ನೀಡಿವೆ.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ವೇದಿಕೆಯಲ್ಲಿದ್ದರು.

ಕೊರೋನಾ ಸೋಂಕಿನ ಸಂಕಷ್ಟದ ನಡುವೆಯೂ ಮೈಸೂರು ದಸರಾ -2020 ಸರಳವಾಗಿ ಆಚರಿಸಲಾಗುತ್ತಿದೆ. ಮಧ್ಯಾಹ್ನ 2.59ರಿಂದ 3.20ರ ಅವಧಿಯಲ್ಲಿ ನಂದಿಧ್ವಜಕ್ಕೆ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪೂಜೆ ಸಲ್ಲಿಸಿದರು.
ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪ್ರತಿವರ್ಷ ಐದೂವರೆ ಕಿಮೀ ಸಾಗುತ್ತಿದ್ದ ಜಂಬೂಸವಾರಿ ಈ ಬಾರಿ ಅರಮನೆ ಆವರಣದಲ್ಲಿ 400 ಮೀಟರ್ ಗೆ ಸೀಮಿತವಾಗಿತ್ತು. ಜಂಬೂ ಸವಾರಿ ಕೇವಲ 20 ನಿಮಿಷ ಸಾಗಿತು. ಅಭಿಮನ್ಯುವಿಗೆ, ವಿಜಯ ಮತ್ತು ಕಾವೇರಿ ಕುಮ್ಕಿ ಆನೆಗಳು ಸಾಥ್ ನೀಡಲಿವೆ. ಗೋಪಿ ಮತ್ತು ವಿಕ್ರಮ ನೌಪತ್ ಹಾಗೂ ನಿಶಾನೆ ಆನೆಗಳಾಗಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದವು. ಮೆರವಣಿಗೆಯಲ್ಲಿ 4 ಕಲಾತಂಡ, ಒಂದು ಸ್ತಬ್ಧಚಿತ್ರ, ಎರಡು ಕೆಎಸ್’ಆರ್’ಪಿ ತುಕಡಿಗಳು ಪಾಲ್ಗೊಂಡಿದ್ದವು.
ಯುವ ಕಲಾವಿದ ಶಿವಕುಮಾರ್.ಎಚ್ ದೊಡ್ಡರಿಸಿನಕೆರೆ ಅವರು ಮಹಾಮಾರಿ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ನಾಲ್ಕು ಅಡಿ ಉದ್ದ, ಮೂರು ಅಡಿ ಅಗಲ, ಮೂರು ಅಡಿ ಎತ್ತರವುಳ್ಳ ಪುಟ್ಟ ಸ್ತಬ್ಧಚಿತ್ರವನ್ನು (ಟ್ಯಾಬ್ಲೋ) ಗಮನ ಸೆಳೆಯಿತು.

ದಸರಾ ಆನೆ ಘೀಳಿಟ್ಟಿದ್ದಕ್ಕೆ ಪಲ್ಲಕ್ಕಿ ಎತ್ತುಗಳು ಕಕ್ಕಾಬಿಕ್ಕಿ…

ಮತ್ತಷ್ಟು ಸುದ್ದಿಗಳು

vertical

Latest News

ಹೊಸ ರಾಷ್ಟ್ರೀಯ ಪಕ್ಷ ಅನಾವರಣ, ಸ್ಥಳೀಯರಿಗೆ ಮದ್ಯದ ಬಾಟಲಿ, ಕೋಳಿ!

newsics.com ತೆಲಂಗಾಣ: ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್‌ ರಾವ್‌ ವಿಜಯದಶಮಿಯ ನಿಮಿತ್ತ ಹೊಸ ರಾಷ್ಟ್ರೀಯ ಪಕ್ಷವನ್ನು ಬುಧವಾರ ಅನಾವರಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಆರ್‌ಎಸ್‌ ನಾಯಕನೊಬ್ಬ ಸಾರ್ವಜನಿಕವಾಗಿ ಸ್ಥಳೀಯ ಜನರಿಗೆ...

ಚಡ್ಡಿಗಳೇ ಎಚ್ಚರ – ಪಿಎಫ್‍ಐ ನಾವು ಮರಳಿ ಬರುತ್ತೇವೆ, ರಸ್ತೆ ಮೇಲೆ ಎಚ್ಚರಿಕೆಯ ಬರಹ

newsics.com ಮಂಗಳೂರು: PFI ಬ್ಯಾನ್ ಬೆನ್ನಲ್ಲೇ  ಮಂಗಳೂರಿನ ರಸ್ತೆಯೊಂದರ ಮೇಲೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಯಿಂದ ಎಚ್ಚರಿಕೆಯ ಬರಹವೊಂದನ್ನು ಬರೆಯಲಾಗಿದೆ. ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ ರಸ್ತೆ ಮೇಲೆ ಎಚ್ಚರಿಕೆಯ ಬರಹ ಬರೆಯಲಾಗಿದೆ....

ಹಿಮಕುಸಿತಕ್ಕೆ ಸಿಲುಕಿ 20 ಪರ್ವತಾರೋಹಿಗಳ ಸಾವಿನ ಶಂಕೆ

newsics.com .ಡೆಹ್ರಾಡೂನ್:  ಉತ್ತರಾಖಂಡ್ ನಲ್ಲಿ ಭೀಕರ ದುರಂತ ಸಂಭವಿಸಿದೆ ಉತ್ತರಾಖಂಡ್ ನ ಘರ್ವಾಲ್ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ 20 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ರಕ್ಷಣಾ ಪಡೆ...
- Advertisement -
error: Content is protected !!