ನವದೆಹಲಿ: ಆರು ವರ್ಷದ ಮಗುವೊಂದು ‘ಮೋದಿ ನಾವು ನಿಮ್ಮನ್ನು ಕೊಲ್ಲುತ್ತೇವೆ’ (ಹಮ್ ಮೋದಿ ಕೋ ಮಾರೆಂಗೆ) ಎಂದು ಹೇಳಿರುವುದು ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಇಂದೋರ್ ನ ಇಂಡೆಕ್ಸ್ ಮಡಿಕಲ್ ಕಾಲೇಜಿನಲ್ಲಿ ಈ ಪ್ರಸಂಗ ನಡೆದಿದೆ ಎಂದು ವಿಡಿಯೋವನ್ನು ಟ್ವಿಟರ್ ಗೆ ಶನಿವಾರ ಪೋಸ್ಟ್ ಮಾಡಿರುವ ಬಿಜೆಪಿ ಐಟಿ ಸೆಲ್ ನ ಮಖ್ಯಸ್ಥ ಅಮಿತ್ ಮಾಳವೀಯಾ, ಮಗುವಿನ ಮನಸ್ಸಲ್ಲಿ ವಿಷ ತುಂಬಿದವರು ಯಾರು ಎಂದು ಪ್ರಶ್ನಿಸಿದ್ದಾರೆ.
ಕೊರೋನಾದಿಂದ ಗುಣಮುಖರಾದ ವ್ಯಕ್ತಿಯೊಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ, ಅಲ್ಲಿದ್ದ ಮಗುವೊಂದು ‘ಮೋದಿ ನಾವು ನಿಮ್ಮನ್ನು ಕೊಲ್ಲುತ್ತೇವೆ’ (ಹಮ್ ಮೋದಿ ಕೋ ಮಾರೆಂಗೆ) ಎಂದು ಹೇಳಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಈ ವಿಡಿಯೋ ಟ್ವಿಟ್ಟರ್ನಲ್ಲಿ ಭಾರೀ ವೈರಲ್ ಆಗಿದ್ದು, 1.8 ಸಾವಿರ ಜನರು ಕಮೆಂಟ್ ಮಾಡಿದ್ದಾರೆ. 6.4 ಸಾವಿರ ಜನ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. 14 ಸಾವಿರ ಜನ ಲೈಕ್ ಮಾಡಿದ್ದಾರೆ.