ನೆಲ್ಲೂರು: ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಉದಾತ್ತ ಉದ್ದೇಶಕ್ಕಾಗಿ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಕಂಚಿ ಕಾಮಕೋಟಿ ಪೀಠಕ್ಕೆ ದಾನ ಮಾಡಿದ್ದಾರೆ.
ನೆಲ್ಲೂರಿನ ತಿಪ್ಪರಾಜುವಾರಿ ರಸ್ತೆಯಲ್ಲಿರುವ ತಮ್ಮ ಪಿತ್ರಾರ್ಜಿತ ಮನೆಯನ್ನು ಕಂಚಿ ಕಾಮಕೋಟಿ ಪೀಠಕ್ಕೆ ಹಸ್ತಾಂತರಿಸಿದ್ದಾರೆ. ತಮ್ಮ ಪಿತ್ರಾರ್ಜಿತ ಮನೆಯನ್ನು ಸಂಸ್ಕೃತ ಹಾಗೂ ವೇದ ಪಾಠಶಾಲೆ ಆರಂಭಿಸುವುದಕ್ಕೆ ನೀಡಿದ್ದಾರೆ. ನೆಲ್ಲೂರಿನಲ್ಲಿ ಕಂಚಿ ಕಾಮಕೋಟಿ ಪೀಠದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮಿಯವರಿಗೆ ಹಸ್ತಾಂತರಿಸಿದ್ದಾರೆ.
ಕಂಚಿ ಪೀಠಕ್ಕೆ ತಮ್ಮ ಮನೆಯನ್ನೇ ದಾನ ಮಾಡಿದ ಎಸ್ಪಿಬಿ!
Follow Us