Friday, May 20, 2022

ನನ್ನ ಸಮಾಧಿ ಮೇಲೆ ಈ ಸಾಲುಗಳಿರಲಿ…

Follow Us

newsics.com
ಬೆಂಗಳೂರು: ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಂಗೀತ ತಜ್ಞ ಬಾಲಮುರಳಿಕೃಷ್ಣ ಅವರನ್ನು ತಮ್ಮ ಗುರು ಎಂದು ಭಾವಿಸಿ ಅವರನ್ನು ಸದಾ ಪೂಜಿಸಿ ಗೌರವಿಸುತ್ತಿದ್ದರು. ಬಾಲಸುಬ್ರಹ್ಮಣ್ಯಂರನ್ನು ಪುತ್ರ ವಾತ್ಸಲ್ಯದಿಂದಲೇ ಕಂಡಿದ್ದ ಬಾಲಮುರಳಿಕೃಷ್ಣ ಅವರು ಸದಾ ಎಸ್‍ಪಿಬಿಯವರ ಸಂಗೀತ ಸೇವೆಯನ್ನು ಶ್ಲಾಘಿಸುತ್ತಿದ್ದರು.

1998ರಲ್ಲಿ ನಡೆದ ಒಂದು ಖಾಸಗಿ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಬಾಲಮುರಳಿಕೃಷ್ಣ ಅವರು ಎಸ್‍ಪಿಬಿ ಬಗ್ಗೆ ಒಂದು ಸುಂದರವಾದ ಮಾತು ಹೇಳಿದ್ದರು. ಸ್ವಲ್ಪ ಕಷ್ಟಪಟ್ಟರೆ, ಬಾಲಸುಬ್ರಹ್ಮಣ್ಯಂ ನನ್ನ ಹಾಗೇ ಹಾಡಿ ಬಿಡುತ್ತಾನೆ. ಆದರೆ ಎಷ್ಟೇ ಕಷ್ಟಪಟ್ಟರೂ ನಾನು ಅವನ ಹಾಗೆ ಹಾಡಲು ಸಾಧ್ಯವಿಲ್ಲ ಎಂದು. ಈ ಮಾತನ್ನು ಸದಾಕಾಲ ಸ್ಮರಿಸಿಕೊಳ್ಳುತ್ತಿದ್ದ ಎಸ್‍ಪಿಬಿ ನನ್ನ ಸಮಾಧಿ ಮೇಲೆ ಏನಾದ್ರು ಬರೆಯಬೇಕೆಂದರೆ ಇದೇ ಸಾಲುಗಳನ್ನು ಬರೆಸಿ ಎಂದಿದ್ದರು.

ಅಷ್ಟೇ ಅಲ್ಲ, ಈ ವ್ಯಕ್ತಿ ಬಾಲಮುರಳಿಕೃಷ್ಣ ಅವರಿಂದ ಇಂತಹದೊಂದು ಹೊಗಳಿಕೆ ಮಾತುಗಳನ್ನು ಹೇಳಿಸಿಕೊಂಡಿದ್ದಾನೆ ಎಂಬುದನ್ನು ಉಲ್ಲೇಖಿಸಿ. ಬದುಕಿನಲ್ಲಿ ಇದಕ್ಕಿಂತ ದೊಡ್ಡ ಸಾಧನೆ ಇನ್ಯಾವುದೂ ಇಲ್ಲ ಎಂದು ಸದಾ ಕಾಲ ಹಲವು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ. ಬಾಲಮುರಳಿಕೃಷ್ಣ ಅವರು 2016 ರಲ್ಲಿ ನಿಧನರಾದಾಗ ಎಸ್‍ಪಿಬಿ ಬಹಳ ದುಃಖಪಟ್ಟಿದ್ದರು. ಇದೀಗ ಗಾನಪ್ರಿಯರನ್ನು ಅಗಲಿ ಸ್ವತಃ ಎಸ್‍ಪಿಬಿ ಚಿರನಿದ್ರೆಗೆ ಜಾರಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಮತ್ತೆ ಚಿನ್ನ, ಬೆಳ್ಳಿ ದುಬಾರಿ

newsics.com ಬೆಂಗಳೂರು: ಶುಕ್ರವಾರ (ಮೇ 20) ಚಿನ್ನ, ಬೆಳ್ಳಿ ಮತ್ತೆ ದುಬಾರಿಯಾಗಿದೆ. 10 ಗ್ರಾಂ ಚಿನ್ನಕ್ಕೆ 640 ರೂ. ಹೆಚ್ಚಳವಾಗಿದೆ. ಬೆಳ್ಳಿ 1 ಕೆಜಿಗೆ ಬರೋಬ್ಬರಿ 900...

ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಸಾಧ್ಯತೆ

newsics.com ಬೆಂಗಳೂರು: ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ‌ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ನಾಗೇಶ್, ದ್ವಿತೀಯ ಪಿಯು...

ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡದಲ್ಲಿ ಮಾತನಾಡಿದ ಸಂಸದ ಚಂದ್ರ ಆರ್ಯ

newsics.com ಕೆನಡಾ: ಕೆನಡಾ ಪಾರ್ಲಿಮೆಂಟ್ ನಲ್ಲಿ ಸಂಸದ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿದ್ದು, ಇದೇ ಮೊದಲ ಬಾರಿಗೆ ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡದ ಕಹಳೆ ಮೊಳಗಿದೆ. ನಾನು ನನ್ನ ಮಾತೃ ಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದ...
- Advertisement -
error: Content is protected !!