ಶ್ರೀಲಂಕಾ: ತೆಂಗು ಪ್ರಮುಖ ಕೃಷಿಉತ್ಪಾದನೆಯಾಗಿರುವ ಶ್ರೀಲಂಕಾದಲ್ಲಿ ತೆಂಗಿನ ಉತ್ಪಾದನೆ ಕುಂಠಿತವಾಗಿದ್ದು, ಈ ಬಗ್ಗೆ ಜನರಿಗೆ ಮಾಹಿತಿ ಹಾಗೂ ಅರಿವು ಮೂಡಿಸಲು ಸಚಿವರೇ ಖುದ್ದು ಮರವೇರಿದ ಘಟನೆ ವರದಿಯಾಗಿದೆ.
ಶ್ರೀಲಂಕಾ ಸಚಿವ ಸಂಪುಟದ ಸಚಿವ ಅರುಂಧಿಕಾ ಫರ್ನಾಂಡೋ ತೆಂಗಿನ ಮರ ಏರಿ ಜನತೆಗೆ ತೆಂಗು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ದೇಶದಲ್ಲಿ 700 ಮಿಲಿಯನ್‍ನಷ್ಟು ತೆಂಗಿನಕಾಯಿ ಪೊರೈಕೆಗೆ ಬೇಡಿಕೆ ಇದ್ದು, ಸ್ಥಳೀಯ ಉದ್ಯಮ ಹಾಗೂ ಆಹಾರದ ಬಳಕೆಯಿಂದ ತೆಂಗಿನ ಬೇಡಿಕೆ ಹೆಚ್ಚಿದೆ ಎಂಬ ವಿವರಣೆ ನೀಡಿದ್ದಾರೆ.
ದೇಶದ ಪ್ರಮುಖ ವಿದೇಶಿ ವಿನಿಮಯದ ಆಧಾರವಾಗಿರುವ ತೆಂಗಿನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿರುವ ಫರ್ನಾಂಡೋ, ದೇಶದಲ್ಲಿ ಲಭ್ಯವಿರುವ ಎಲ್ಲ ಖಾಲಿ ಜಾಗವನ್ನು ತೆಂಗಿನ ಬೆಳೆಗೆ ಬಳಸಿಕೊಳ್ಳುವಂತೆ ಹಾಗೂ ತೆಂಗಿನ ಉತ್ಪನ್ನಗಳ ಉದ್ಯಮವನ್ನು ಬೆಂಬಲಿಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೇ ದೇಶದಲ್ಲಿ ತೆಂಗಿನಕಾಯಿ ಬೆಲೆ ಬಗ್ಗೆ ಮಾತನಾಡಿದ ಅವರು, ಪೊರೈಕೆ ಕೊರತೆ ಇರೋದರಿಂದ ತೆಂಗಿನಕಾಯಿ ಬೆಲೆ ಇಳಿಸೋ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದಾರೆ. ಇನ್ನು ತೆಂಗಿನ ಉತ್ಪಾದನೆ ಕುರಿತು ಜನರಲ್ಲಿ ಅರಿವು ಮೂಡಿಸೋಕೆ ಜೋಶ್‍ನಲ್ಲಿ ಮರ ಏರಿದ್ದ ಸಚಿವರನ್ನು ಮರದಿಂದ ಕೆಳಕ್ಕೆ ಇಳಿಸಲು ಸಚಿವರ ಬೆಂಬಲಿಗರು ಸಾಕಷ್ಟು ಶ್ರಮಿಸಿದರೂ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ತೆಂಗಿನ ಕೊರತೆ ಮನವರಿಕೆ ಮಾಡಿಸಲು ಮರವೇರಿದ ಸಚಿವ
Follow Us