ಇಸ್ಲಾಮಾಬಾದ್: ಬುದ್ಧನ ಪುರಾತನ ವಿಗ್ರಹವನ್ನು ಧ್ವಂಸಗೊಳಿಸಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ನಡೆದಿದೆ.
ಮನೆ ನಿರ್ಮಾಣಕ್ಕೆಂದು ಅಡಿಪಾಯ ತೆಗೆಯುತ್ತಿದ್ದಾಗ ಸಿಕ್ಕ ಪುರಾತನ ಕಾಲದ ಬುದ್ಧನ ವಿಗ್ರಹವನ್ನು ಅಲ್ಲಿದ್ದವರೆಲ್ಲ ಸೇರಿ ಕುಟ್ಟಿ ಕುಟ್ಟಿ ಪುಡಿ ಮಾಡಿದ ಘಟನೆ ಪಾಕಿಸ್ತಾನದ ಮಾರ್ಡನ್ ಜಿಲ್ಲೆಯ ತಖ್ತ್ ಬಹಿ ಎಂಬಲ್ಲಿ ನಡೆದಿದೆ. ಬುದ್ಧನ ವಿಗ್ರಹ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ. ಹೀಗಾಗಿ ನಾಶಪಡಿಸಲಾಗಿದೆ ಎಂದು ವಿಗ್ರಹ ಧ್ವಂಸಗೊಳಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಮನೆ ನಿರ್ಮಾಣಕ್ಕೆ ಅಡಿಪಾಯ ತೆಗೆಯುತ್ತಿದ್ದಾಗ ಬುದ್ಧನ ಪುರಾತನ ಕಾಲದ ವಿಗ್ರಹ ಸಿಕ್ಕಿದೆ. ಆದರೆ ಅದನ್ನು ಅಲ್ಲಿಯೇ ಇದ್ದವರೆಲ್ಲ ಸೇರಿ ಧ್ವಂಸ ಮಾಡಿದ್ದಾರೆ. ತುಳಿದು ಆಕ್ರೋಶ ಹೊರಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪ್ರತಿಮೆಯನ್ನೂ ತುಂಡುತುಂಡು ಮಾಡಿದ್ದಾರೆ. ಇದು ಮುಸ್ಲಿಮರಿಗೆ ಸಂಬಂಧಪಟ್ಟ ವಸ್ತುವಲ್ಲ. ಹಾಗಾಗಿ ಧ್ವಂಸ ಮಾಡಲಾಗಿದೆ ಎಂದು ಸಮರ್ಥನೆಯನ್ನೂ ನೀಡಿದ್ದಾರೆ. ಬುದ್ಧನ ವಿಗ್ರಹವನ್ನು ಕುಟ್ಟಿ ಪುಡಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಗಿಲ್ಗಿಟ್-ಬಲ್ಟಿಸ್ಥಾನ್ ಬಿಜೆಪಿ ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಪ್ರತಿಮೆಯನ್ನು ಧ್ವಂಸಗೊಳಿಸಿದ ನಾಲ್ವರನ್ನೂ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಹಿಂದಿನ ಹೆಸರು ಗಾಂಧಾರಾ ಆಗಿದ್ದು, ಈ ಪ್ರದೇಶ ಬೌದ್ಧ ಧರ್ಮದ ಅನುಯಾಯಿಗಳ ಪವಿತ್ರ ಸ್ಥಳವಾಗಿತ್ತು ಎಂದು ಹೇಳಲಾಗಿದೆ.
#Shameful A life sized statue of God Buddha was discovered in a construction site in Takhtbhai,Pakistan.
— BJP Gilgit-Baltistan (Official) (@BJP4GB) July 18, 2020
However,b4 the Archaeology dept was informed about it, contractor had already broken it into pieces on suggestion of local Molvi. After Carbon dating,it is found 1800 yrs old. pic.twitter.com/mJK0mtbqzR