newsics.com
ನವದೆಹಲಿ: ದೇಶದ ಹಿರಿಯ ಅಥ್ಲೀಟ್, ಏಷ್ಯನ್ ಗೇಮ್ಸ್ ಪದಕ ವಿಜೇತೆ ಕೊಡಗಿನ ಎಂಆರ್ ಪೂವಮ್ಮ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, 2 ವರ್ಷ ನಿಷೇಧಕ್ಕೆ ಒಳಗಾಗಿದ್ದಾರೆ.
ಈ ಹಿಂದೆಯೂ ಅವರು 3 ತಿಂಗಳವರೆಗೆ ನಿಷೇಧಕ್ಕೆ ಒಳಗಾಗಿದ್ದರು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ನಾಡಾ ಈಗ 2 ವರ್ಷ ಶಿಕ್ಷೆಯನ್ನು ವಿಸ್ತರಿಸಿದೆ.
2021ರ ಫೆಬ್ರವರಿ 18 ರಂದು ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಸಮಯದಲ್ಲಿ 32 ವರ್ಷದ ಪೂವಮ್ಮ ಅವರ ಡೋಪ್ ಮಾದರಿಯನ್ನು ಸಂಗ್ರಹಿಸಲಾಗಿತ್ತು. ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ರದ್ದು ಮಾಡಿದ್ದ ಉತ್ತೇಜಕ ಮೀಥೈಲ್ ಹೆಕ್ಸಾನಿಯಮೈನ್ ತೆಗೆದುಕೊಂಡಿದ್ದು ಪಾಸಿಟಿವ್ ಬಂದ ಅವರನ್ನು ಮೂರು ತಿಂಗಳು ಕಾಲ ಅಮಾನತುಗೊಳಿಸಿತ್ತು.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆಯ (ನಾಡಾ) ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ನಾಡಾದ ಡೋಪಿಂಗ್ ವಿರೋಧಿ ಮೇಲ್ಮನವಿ ಶಿಸ್ತು ಸಮಿತಿ ವಿಚಾರಣೆ ಮೇಲ್ಮನವಿ ಅಂಗೀಕರಿಸಿ ಬಳಿಕ, ಡೋಪಿಂಗ್ ರುಜುವಾತಾದ ಹಿನ್ನೆಲೆಯಲ್ಲಿ ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧವನ್ನು ಕಾಯಂಗೊಳಿಸಿದೆ.
ದೆಹಲಿಯಲ್ಲಿ ಮತ್ತೊಂದು ಮಂಕಿಪಾಕ್ಸ್ ಪತ್ತೆ- ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ