Tuesday, July 5, 2022

ವಿದ್ಯಾರ್ಥಿಯಿಂದ ಗುಂಡಿನ ದಾಳಿ: 18 ಶಾಲಾ ಮಕ್ಕಳು, ಓರ್ವ ಶಿಕ್ಷಕ ಸೇರಿ 21 ಮಂದಿ ಸಾವು, ಬಂದೂಕುಧಾರಿಯ‌ ಹತ್ಯೆ

Follow Us

newsics.com

ವಾಷಿಂಗ್ಟನ್: ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿ 18 ಮಕ್ಕಳು, ಓರ್ವ ಶಿಕ್ಷಕ ಸೇರಿ 21 ಮಂದಿಯನ್ನು‌ ಕೊಂದಿದ್ದಾನೆ.

ಘಟನೆ ಬಳಿಕ ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿಯನ್ನು ಪೊಲೀಸರು ಹತ್ಯೆಗೈದಿದ್ದಾರೆ.

ಟೆಕ್ಸಾಸ್‌ನ ಉವಾಲ್ಡೆಯ ಪ್ರಾಥಮಿಕ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಟೆಕ್ಸಾಸ್ ಗೌವರ್ನರ್ ಜಾರ್ಜ್ ಅಬಾಟ್ ಈ ಮಾಹಿತಿ ನೀಡಿದ್ದಾರೆ.

ಗುಂಡಿನ ದಾಳಿ ನಡೆಸಿದ 18 ವರ್ಷದ ವಿದ್ಯಾರ್ಥಿಯಾಗಿದ್ದು, ಆತನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಜಾರ್ಜ್ ಹೇಳಿದ್ದಾರೆ.

ಹಂತಕ ವಿದ್ಯಾರ್ಥಿ ಉವಾಲ್ಡೆಯಲ್ಲಿರುವ ಪ್ರಾಥಮಿಕ ಶಾಲೆಯ ಹತ್ತಿರದಲ್ಲಿರುವ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿರುವ ಸ್ಯಾಂಡಿ ಹುಕ್ ಎಲಿಮೆಂಟರಿಯಲ್ಲಿ 2012ರಲ್ಲಿ ನಡೆದ ಗುಂಡಿನ ದಾಳಿ ಬಳಿಕ ನಡೆದ ಅತಿ ದೊಡ್ಡ ದುರಂತ ಇದಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

KGF ಚಾಪ್ಟರ್ 2 ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ತಮ್ಮ ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ ಲೇಖಕ ದೇವನೂರ ಮಹಾದೇವ

ಕೋಕಾ ಕೋಲಾಗೆ ಎನ್​ಜಿಟಿ ವಿಧಿಸಿದ್ದ ₹ 15 ಕೋಟಿ ದಂಡಕ್ಕೆ ಸುಪ್ರೀಂ ತಡೆ

ಮತ್ತಷ್ಟು ಸುದ್ದಿಗಳು

vertical

Latest News

ಕಾಲಿಗೆ ನಮಸ್ಕಾರ ಮಾಡುವ ನಾಟಕ: ಚಂದ್ರಶೇಖರ್ ಗುರೂಜಿಗೆ 70 ಬಾರಿ ಇರಿದ ದುಷ್ಕರ್ಮಿಗಳು

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಮೇಲೆ ದುಷ್ಕರ್ಮಿಗಳು 70 ಬಾರಿ ಇರಿದು ಹತ್ಯೆ ಮಾಡಿದ್ದಾರೆ.  ಅತ್ಯಂತ ಭೀಕರವಾಗಿ ಚುಚ್ಚಿ ಚುಚ್ಚಿ ಹತ್ಯೆ ಮಾಡಲಾಗಿದೆ. ಇಬ್ಬರು...

ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸ್ಪೈಸ್ ಜೆಟ್

newsics.com ನವದೆಹಲಿ:  ದೆಹಲಿಯಿಂದ  ದುಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದ ಕಾರಣ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ  ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ತಕ್ಷಣ ಪೈಲಟ್ ಕರಾಚಿ ವಿಮಾನ ನಿಲ್ದಾಣ...

ಚಾಕು ಇರಿದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ...
- Advertisement -
error: Content is protected !!