* ಜುಲೈ 27ರಿಂದ ಅಂತಿಮ ಹಂತದ ಪ್ರಯೋಗ
ವಾಷಿಂಗ್ಟನ್: ಕೊರೋನಾದಿಂದ ಬೇಸತ್ತ ಮನುಕುಲಕ್ಕೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕೋವಿಡ್-19 ಅಭಿವೃದ್ಧಿಪಡಿಸಿದ ಲಸಿಕೆ ಮನುಷ್ಯರ ಮೇಲಿನ ಪ್ರಯೋಗದಲ್ಲಿ ಯಶಸ್ಸು ಸಿಕ್ಕಿದೆ.
ಲಸಿಕೆ ವಿಜ್ಞಾನಿಗಳು ನೀರಿಕ್ಷಿಸಿದ ಪ್ರಮಾಣದಲ್ಲೇ ರೋಗನಿರೋಧಕ ಶಕ್ತಿ ಹೆಚ್ಚಿಸಿದೆ ಎಂದು ಅಮೆರಿಕ ಸರ್ಕಾರದ ಸಾಂಕ್ರಾಮಿಕ ರೋಗ ತಜ್ಞ ಡಾ.ಆ್ಯಂಟನಿ ಫೌಸಿ ಹೇಳಿದ್ದು, ಇದೊಂದು ಸಂತಸದ ಸಂಗತಿ ಎಂದಿದ್ದಾರೆ.
ಕೊರೋನಾದಿಂದ ಗುಣಮುಖರಾದರೂ ಮತ್ತೆ ಪಾಸಿಟಿವ್
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ಮಾಡೆರ್ನಾ ಸಂಸ್ಥೆಯಲ್ಲಿ ಸಿದ್ಧಪಡಿಸಲಾದ ಈ ಲಸಿಕೆಯ ಅಂತಿಮ ಹಂತದ ಪ್ರಯೋಗ ಜುಲೈ 27 ರಿಂದ ಆರಂಭವಾಗಲಿದ್ದು, ಕೊರೋನಾದಿಂದ ಜನರನ್ನು ರಕ್ಷಿಸಲು ಇದು ಎಷ್ಟು ಪ್ರಯೋಜನಕಾರಿ ಎಂದು ಅರಿಯಲು 30 ಸಾವಿರ ಜನರ ಮೇಲೆ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ.
ಮಾರ್ಚ್’ನಲ್ಲಿ 45 ಸ್ವಯಂಸೇವಕರ ಮೇಲೆ ಈ ಲಸಿಕೆ ಪ್ರಯೋಗಿಸಲಾಗಿತ್ತು. ಈಗ ಇವರ ರಕ್ತಗಳಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿರುವುದನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಅಫ್ ಮೆಡಿಸಿನ್ವರದಿ ಮಾಡಿದೆ.
ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ; 570 ಜನರ ವಿರುದ್ಧ ಎಫ್ಐಆರ್
ಈ ಲಸಿಕೆ ಸರಿಯಾಗಿ ಕೆಲಸ ಮಾಡಲು ಒಂದು ತಿಂಗಳ ಅಂತರದಲ್ಲಿ ಎರಡು ಡೋಸ್ ತೆಗೆದುಕೊಳ್ಳಬೇಕಾಗುತ್ತದೆ. ಲಸಿಕೆ ತೆಗೆದುಕೊಂಡ ಕೆಲವರಲ್ಲಿ ಸಾಮಾನ್ಯವಾದ ಚಳಿ ಜ್ವರ ಕಾಣಿಸಿಕೊಂಡಿದ್ದು, ರೋಗ ತಡೆಯುವಂತೆ ಮಾಡಲು ಇಷ್ಟಾದರೂ ಬೆಲೆ ತೆರಲೇಬೇಕು ಎಂದು ಅಮೆರಿಕದ ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ.