newsics.com
ನವದೆಹಲಿ: ಕೊರೋನಾಕ್ಕೆ ಬಲಿಯಾದ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ನವದೆಹಲಿಯಲ್ಲಿ ನಡೆಯಲಿದೆ. ಕೊರೋನಾ ಮಾರ್ಗ ಸೂಚಿ ಅನ್ವಯ ಅಂತ್ಯಕ್ರಿಯೆ ನಡೆಯಲಿದೆ. 20 ಮಂದಿ ಮಾತ್ರ ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಲಿದ್ದಾರೆ.
ಸಂಜೆ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸುರೇಶ್ ಅಂಗಡಿ ಅವರ ಮಗಳು ಸ್ಫೂರ್ತಿ ಸೇರಿದಂತೆ ಕುಟುಂಬದ 9 ಮಂದಿ ಸದಸ್ಯರು ದೆಹಲಿಗೆ ತೆರಳಿದ್ದಾರೆ. ಮುಂಬೈ ಮೂಲಕ ದೆಹಲಿಗೆ ಅವರು ಪ್ರಯಾಣ ಬೆಳೆಸಿದ್ದಾರೆ.
ಇದೇ ವೇಳೆ ಸಚಿವ ಸುರೇಶ್ ಅಂಗಡಿ ಅವರ ಗೌರವಾರ್ಥ ಇಂದು ಶೋಕಾಚರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯಾವುದೇ ಮನೋರಂಜನೆ ಕಾರ್ಯಕ್ರಮ ನಡೆಸದಂತೆ ಸೂಚಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ಆದೇಶಿಸಲಾಗಿದೆ.