ಪಂಜಾಬ್: ಇತ್ತೀಚಿಗೆ ದರೋಡೆಕೋರರ ದಾಳಿ ವೇಳೆ ಹತ್ಯೆಯಾದ ತಮ್ಮ ಸಂಬಂಧಿ ನಿವಾಸಕ್ಕೆ ಕ್ರಿಕೆಟರ್ ಸುರೇಶ್ ರೈನಾ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ.
ಪಠಾಣಕೋಟ್ ಜಿಲ್ಲೆಯಲ್ಲಿರುವ ಸುರೇಶ್ ರೈನಾ ಸಹೋದರ ಸಂಬಂಧಿ ಮೇಲೆ ದರೋಡೆಕೋರರು ಅಟ್ಯಾಕ್ ಮಾಡಿದ್ದು, ಈ ಘಟನೆಯಲ್ಲಿ ಅವರು ಸಾವನ್ನಪ್ಪಿದ್ದರು.
ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಂತಾರಾಜ್ಯ ದರೋಡೆಕೋರರಾಗಿರುವ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇನ್ನು ಹಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸುರೇಶ್ ರೈನಾ, ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಉತ್ತಮ ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಹತ್ಯೆಯಾದ ಸಂಬಂಧಿ ಮನೆಗೆ ಸುರೇಶ್ ರೈನಾ ಭೇಟಿ
Follow Us