newsics.com
ನವದೆಹಲಿ: ಸಂಸತ್ ಭವನದ ಸಮೀಪವೇ ನಿರ್ಮಾಣವಾಗಲಿರುವ ನೂತನ ಸಂಸತ್ ಭವನ ಕಾಮಗಾರಿ ಗುತ್ತಿಗೆಯನ್ನು ಟಾಟಾ ಪ್ರೊಜೆಕ್ಟ್ ಲಿಮಿಟೆಡ್ ಪಡೆದುಕೊಂಡಿದೆ.
ಈ ಮಾಹಿತಿಯನ್ನು ಬುಧವಾರ ಕೇಂದ್ರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, 861.90 ಕೋಟಿ ರೂಪಾಯಿ ಮೊತ್ತದ ಗುತ್ತಿಗೆ ಇದಾಗಿದೆ. 865 ಕೋಟಿ ರೂಪಾಯಿಯ ಬಿಡ್ ಸಲ್ಲಿಸಿದ ಲಾರ್ಸನ್ ಹಾಗೂ ಟರ್ಬೋ ಸಂಸ್ಥೆಯನ್ನು ಹಿಂದಿಕ್ಕಿ ಟಾಟಾ ಸಂಸ್ಥೆ ಈ ಬಿಡ್ ಪಡೆದುಕೊಂಡಿತು.
ನೂತನ ಸಂಸತ್ ಕಟ್ಟಡದ ನಿರ್ಮಾಣಕ್ಕೆ ಕೇಂದ್ರ ಲೋಕೋಪಯೋಗಿ ಇಲಾಖೆ ಬುಧವಾರ ಬಿಡ್‌ಗಳನ್ನು ತೆರೆಯಿತು. ಈ ಯೋಜನೆ ಮುಂದಿನ ವರ್ಷ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ನೂತನ ಸಂಸತ್ ಭವನ ಕಟ್ಟಡ ತ್ರಿಕೋನ ವಿನ್ಯಾಸದಲ್ಲಿ ಇರಲಿದೆ. ಈ ಕಟ್ಟಡವನ್ನು ಈಗಿರುವ ಸಂಸತ್ ಭವನದ ಸಮೀಪವೇ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಮಾಜಿ ಮುಖ್ಯಸ್ಥ ಡಿಯಾಕ್’ಗೆ 2 ವರ್ಷ ಜೈಲು