newsics.com
ಹೈದರಾಬಾದ್: ಈ ಬಾರಿಯೂ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರು ಪ್ರಧಾನಿ ಮೋದಿ ಭೇಟಿಯನ್ನು ತಪ್ಪಿಸಿಕೊಂಡು, ಟೀಕೆಗೆ ಗುರಿಯಾಗಿದ್ದಾರೆ.
ಕೇವಲ ನಾಲ್ಕು ತಿಂಗಳೊಳಗೆ ಎರಡನೇ ಬಾರಿ ಮೋದಿ ಅವರ ಭೇಟಿಯನ್ನು ತಪ್ಪಿಸಿಕೊಂಡಿದ್ದಾರೆ. ಸಿಎಂ ಚಂದ್ರಶೇಖರ್ ರಾವ್ ಅವರು ಬುಧವಾರ ಹೈದರಾಬಾದ್‌ನಲ್ಲಿ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್‌ಬಿ) ನಲ್ಲಿ 20ನೇ ವಾರ್ಷಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವುದರಿಂದ ತಪ್ಪಿಸಿಕೊಂಡಿದ್ದಾರೆ.
ಹೈದರಾಬಾದ್‌ಗೆ ಫೆಬ್ರವರಿ 5 ರಂದು ಆಗಮಿಸಿದ್ದ ಮೋದಿ ಅವರನ್ನು ಕೆಸಿಆರ್ ಬರಮಾಡಿಕೊಂಡಿರಲಿಲ್ಲ. ಅಂದು ಪ್ರಧಾನಿ ಭಾಗವಹಿಸಿದ್ದ ಎರಡು ಕಾರ್ಯಕ್ರಮಗಳಲ್ಲೂ ಭಾಗಿಯಾಗಿರಲಿಲ್ಲ.
ರಾಷ್ಟ್ರ ರಾಜಕಾರಣದಲ್ಲಿ ಮೋದಿ ವಿರುದ್ಧ ಪ್ರಮುಖ ಪಾತ್ರ ವಹಿಸಿರುವ ರಾವ್ ಅವರು ಬುಧವಾರ ಸಂಜೆ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಲಿದ್ದಾರೆ
ಮತ್ತೊಮ್ಮೆ ಪ್ರಧಾನಿ ಭೇಟಿಯನ್ನು ತಪ್ಪಿಸಿದಹ ಕೆಸಿಆರ್ ವಿರುದ್ಧ ತೆಲಂಗಾಣ ಬಿಜೆಪಿ ವಾಗ್ದಾಳಿ ನಡೆಸಿದ್ದು, ಮೋದಿ ಅವರನ್ನು ಎದುರಿಸಲು ಸಾಧ್ಯವಾಗದೆ ಟಿಆರ್‌ಎಸ್ ಮುಖ್ಯಸ್ಥರು ರಾಜ್ಯದಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.