Monday, March 8, 2021

ಹತ್ತು ಲಕ್ಷ ರೂ. ಮೌಲ್ಯದ ಆಮೆ ಕಳವು

newsics.com
ಚೆನ್ನೈ: ಮಹಾಬಲಿಪುರಮ್‌ನಲ್ಲಿರುವ ಮೊಸಳೆ ಪಾರ್ಕ್‌ನಿಂದ ಜಗತ್ತಿನಲ್ಲಿ ಎರಡನೇ ಅತಿದೊಡ್ಡ ವರ್ಗಕ್ಕೆ ಸೇರಿದ, ಜಾಗತಿಕ ಮಾರುಕಟ್ಟೆಯಲ್ಲಿ ಅಂದಾಜು 10 ಲಕ್ಷ ರೂ.ಗಳಿಗೂ ಹೆಚ್ಚಿನ ಮೌಲ್ಯವುಳ್ಳ ಅಲ್ದಬ್ರಾ ಆಮೆಯನ್ನು ಕಳವು ಮಾಡಲಾಗಿದೆ.
ಆರು ವಾರಗಳ ಹಿಂದೆಯೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಕಳ್ಳತನದಲ್ಲಿ ‘ಒಳಗಿನವರ’ ಕೈವಾಡವನ್ನು ಶಂಕಿಸಿದ್ದಾರೆ. ಪಾರ್ಕ್‌ನ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ನ.11 ಮತ್ತು 12ರ ನಡುವಿನ ರಾತ್ರಿಯಲ್ಲಿ ಈ ಕಳ್ಳತನ ನಡೆದಿದೆ ಎಂದು ಶಂಕಿಸಲಾಗಿದೆ. ಕಳ್ಳತನವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗಿದೆ. ವಿಶೇಷ ತಂಡವೊಂದು ಪ್ರಕರಣದ ತನಿಖೆಯನ್ನು ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇ.ಸುಂದರವದನಂ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆಮೆಗಳು ಮತ್ತು ಮೊಸಳೆಗಳು ಸೇರಿದಂತೆ ನೂರಾರು ಸರೀಸೃಪಗಳಿರುವ ಮೊಸಳೆ ಪಾರ್ಕ್ ಎಂದೇ ಕರೆಯಲಾಗುವ ಈ ಪಾರ್ಕ್ ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್ ಸೆಂಟರ್ ಫಾರ್ ಹರ್ಪಿಟಾಲಜಿಯಲ್ಲಿವೆ. ವಿಶ್ವದಲ್ಲಿ ಗಾಲಪ್‌ಗೊಸ್ ಬಳಿಕ ಅತ್ಯಂತ ದೊಡ್ಡ ಗಾತ್ರದ್ದಾದ, ಅಲ್ದಬ್ರಾ ಜಾತಿಗೆ ಸೇರಿದ ನಾಲ್ಕು ಬೃಹತ್ ಆಮೆಗಳು ಈ ಪಾರ್ಕ್‌ನಲ್ಲಿದ್ದು, ಅವುಗಳ ಪೈಕಿ ಒಂದನ್ನು ಕಳವು ಮಾಡಲಾಗಿದೆ. ಸುಮಾರು 150 ವರ್ಷ ಬದುಕುವ 1.5 ಮೀ.ಗೂ ಹೆಚ್ಚು ಉದ್ದ ಮತ್ತು 200 ಕೆ.ಜಿ.ವರೆಗೆ ತೂಕವನ್ನು ಹೊಂದಿರುತ್ತವೆ.
ಕಳ್ಳತನವಾಗಿರುವ ಆಮೆಯು 80ರಿಂದ 100 ಕೆಜಿ ತೂಕದ್ದಾಗಿದ್ದು, ಕೇವಲ 50 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆಮೆಯ ಅಂಗಾಂಗಗಳು ವೈದ್ಯಕೀಯವಾಗಿ ಬಳಕೆಯಾಗುತ್ತವೆ ಎನ್ನಲಾಗಿದೆ.

ಹೆಲಿಪ್ಯಾಡ್ ಅಗೆದ ರೈತರು; ಡಿಸಿಎಂ ಭೇಟಿ ರದ್ದು

ಹೊಸ ಕೊರೋನಾ ವೈರಸ್’ನಿಂದ ನಿರೀಕ್ಷೆ ಮೀರಿ ಹೆಚ್ಚಲಿದೆ ಸಾವು- ಅಧ್ಯಯನ

ಮತ್ತಷ್ಟು ಸುದ್ದಿಗಳು

Latest News

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಶಿಫ್ಟ್

newsics.com ನವದೆಹಲಿ:‌ ಲಂಡನ್ʼನ ಲಾರ್ಡ್ಸ್ʼನಲ್ಲಿ ನಡೆಯಬೇಕಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರವಾಗಿದೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ...

ಗುಜರಾತ್, ರಾಜಸ್ಥಾನದ ಮಾಜಿ ರಾಜ್ಯಪಾಲ ಅನ್ಶುಮಾನ್ ಸಿಂಗ್ ನಿಧನ

newsics.com ಲಕ್ನೋ: ರಾಜಸ್ಥಾನ ಮತ್ತು ಗುಜರಾತಿನ ಮಾಜಿ ರಾಜ್ಯಪಾಲ, ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅನ್ಶುಮಾನ್ ಸಿಂಗ್ (85) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ (ಮಾ.8) ಲಕ್ನೋದಲ್ಲಿ ಕೊನೆಯುಸಿರೆಳೆದರು. 1999-2003ರ ನಡುವೆ...

ವೇದಾದ್ಯಯನ ವಿದ್ಯಾರ್ಥಿ ಪಯಸ್ವಿನಿ ನದಿ ಪಾಲು

newsics.com ಸುಳ್ಯ(ದಕ್ಷಿಣ ಕನ್ನಡ): ವೇದಾದ್ಯಯನ ಮಾಡುತ್ತಿದ್ದ ಬಾಲಕನೊಬ್ಬ ಕಾಲುಜಾರಿ ಪಯಸ್ವಿನಿ ನದಿಗೆ ಬಿದ್ದು ಸಾವನಪ್ಪಿದ್ದಾನೆ.ಜಿಲ್ಲೆಯ ಸುಳ್ಯದಲ್ಲಿ ಈ ದುರಂತ ನಡೆದಿದ್ದು, ದರ್ಬೆತ್ತಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಉದನೇಶ್ವರ...
- Advertisement -
error: Content is protected !!