Monday, August 2, 2021

ಕೊರೊನ ವೈರಸ್ ಗೆ ಥೈಲ್ಯಾಂಡ್ ಔಷಧ

Follow Us

ಥೈಲ್ಯಾಂಡ್: ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನ ವೈರಸ್ ಗೆ ಔಷಧ ಕಂಡುಹಿಡಿದಿರುವುದಾಗಿ ಥೈಲ್ಯಾಂಡ್ ವೈದ್ಯರು ಹೇಳಿಕೊಂಡಿದ್ದಾರೆ.
ಕೊರೊನ ವೈರಸ್ ಗೆ ಈ ಔಷಧ ಪರಿಣಾಮಕಾರಿ ಎಂದು ಥೈಲ್ಯಾಂಡ್ ಸರ್ಕಾರ ಹೇಳಿದೆ. ಹೊಸ ಔಷಧವನ್ನು 71 ವರ್ಷದ ಮಹಿಳೆಗೆ ನೀಡಿದ್ದೇವೆ. ಅವರು 48 ಗಂಟೆಯಲ್ಲಿ ಚೇತರಿಸಿಕೊಂಡಿದ್ದಾರೆಂದು ವೈದ್ಯರ ತಂಡ ಹೇಳಿದೆ.
ಈ ಔಷಧದಲ್ಲಿ ಹೆಚ್ ಐವಿ ಪೀಡಿತರಿಗೆ ನೀಡುವ ಔಷಧವೂ ಸೇರಿದೆಯಂತೆ. ಪ್ರಯೋಗಾಲಯದಲ್ಲಿ ಇನ್ನಷ್ಟು ಪರೀಕ್ಷೆ ನಡೆಯುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಆಯುರ್ವೇದ ಔಷಧ:
ಕೊರೊನ ವೈರಸ್ ಬಾರದಂತೆ ತಡೆಯಲು ಭಾರತದಲ್ಲೂ ಪರಿಣಾಮಕಾರಿ ಆಯುರ್ವೇದ ಔಷಧ ಪ್ರಚಲಿತದಲ್ಲಿದೆ. ಅಮೃತ ಬಳ್ಳಿ, ಹಣ್ಣಾಗದ ಪಪ್ಪಾಯ ಸಮಪ್ರಮಾಣದಲ್ಲಿ ಸೇರಿಸಿ ನಾಲ್ಕು ಪಟ್ಟು ನೀರು, ನಾಲ್ಕು ಬೆಳ್ಳುಳ್ಳಿ, ಜೀರಿಗೆ, ಕಾಳುಮೆಣಸು, ಓಂ ಕಾಳನ್ನು ಹಾಕಿ ಚೆನ್ನಾಗಿ ಕುಡಿಸಿ ಕುಡಿದರೆ ಕೊರೊನ ವೈರಸ್ ನಿಂದ ದೂರ ಇರಬಹುದಂತೆ.
ಈ ಮಧ್ಯೆ, ಕರೋನಾ ವೈರಸ್ ಅಬ್ಬರ ಮುಂದುವರೆದಿದೆ. ಈವರೆಗೆ ವಿಶ್ವದಾದ್ಯಂತ 17387 ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಚೀನಾದಲ್ಲಿ ಈಗಾಗಲೇ 382 ಮಂದಿ ಬಲಿಯಾಗಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

2 ಲಕ್ಷ ರೂ.ಗೆ ಮಾರಾಟವಾದ 90 ಪೈಸೆಯ ಚಮಚ

newsics.com ಲಂಡನ್: 90 ಪೈಸೆಗೆ ಖರೀದಿಸಿದ ಚಮಚವೊಂದು ಹರಾಜಿನಲ್ಲಿ 2ಲಕ್ಷರೂ. ಗೆ ಮಾರಾಟವಾಗಿದೆ. ವ್ಯಕ್ತಿಯೊಬ್ಬರು ಲಂಡನ್​ನ ಬೀದಿಯಲ್ಲಿ ಸೊಟ್ಟಗಾದ ಹಳೇ ಸ್ಪೂನ್ ಒಂದನ್ನು 90 ಪೈಸೆಗೆ ಖರೀದಿಸಿದ್ದರು. ಖರೀದಿಸಿದ...

ಇ-ರುಪಿ ಡಿಜಿಟಲ್ ಸೇವೆಗೆ ಪ್ರಧಾನಿ ಮೋದಿ ಚಾಲನೆ

newsics.com ನವದೆಹಲಿ: ಡಿಜಿಟಲ್ ಮೂಲಕ ಹಣ ಪಾವತಿ ಮಾಡುವ ಇ-ರುಪಿ ಸೇವೆಗೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಇದರಿಂದ ನಗದುರಹಿತ ಹಾಗೂ ಮಧ್ಯವರ್ತಿಗಳ ನೆರವಿಲ್ಲದೆ ಡಿಜಿಟಲ್ ಪಾವತಿ ಮಾಡಬಹುದಾಗಿದೆ. ಆರಂಭಿಕವಾಗಿ ಈ ಸೇವೆ...

ಪೊಲೀಸ್ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು: ವಿದೇಶಿಗರ ಪ್ರತಿಭಟನೆ, ಲಾಠಿ ಚಾರ್ಜ್

newsics.com ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆಯೊಬ್ಬ ಮೃತಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರೇ ಆತನನ್ನು ಕೊಂದಿದ್ದಾರೆ ಎಂದು ನಗರದ  ಜೆ. ಸಿ ನಗರ ಪೊಲೀಸ್ ಠಾಣೆಮುಂದೆ ಆಫ್ರಿಕನ್ ಪ್ರಜೆಗಳು...
- Advertisement -
error: Content is protected !!