ವಿಶೇಷ ಸಂದರ್ಭದಲ್ಲಿ ವಿಶ್ವದ ನಂಬರ ಒನ್ ಸರ್ಚ ಇಂಜೀನ್ ಎನ್ನಿಸಿರುವ ಗೂಗಲ್ ತನ್ನ ಡೂಡಲ್ ಮೂಲಕ ಗೌರವ ಸಮರ್ಪಿಸುತ್ತದೆ. ಇಂದು ಈ ಗೂಗಲ್ ಡೂಡಲ್ ಮೂಲಕ ಕೊರೋನಾ ವಾರಿಯರ್ಸ ಗೆ ಗೌರವ ಸಲ್ಲಿಸಿದೆ.
ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಅದನ್ನು ನಿರ್ವಹಿಸುವಲ್ಲಿ ವೈದ್ಯರು, ದಾದಿಯರು, ಆಂಬ್ಯುಲೆನ್ಸ್ ಚಾಲಕರು, ಆಸ್ಪತ್ರೆ ಸಿಬ್ಬಂದಿ,ಪೊಲೀಸರು ಹೀಗೆ ಲಕ್ಷಾಂತರ ಜನರು ಮನೆ, ಮಕ್ಕಳು,ಸಂಸಾರ,ವೈಯಕ್ತಿಕ ಬದುಕು ಬಿಟ್ಟು ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ದುಡಿಯುತ್ತಿದ್ದಾರೆ. ಅಂತಹವರಿಗೆ ಗೂಗಲ್ ಸೋಮವಾರ ಸ್ಪೆಶಲ್ ಡೂಡಲ್ ಮೂಲಕ ಗೌರವ ಸಮರ್ಪಿಸಿದೆ.
ಗೂಗಲ್ ತನ್ನ ಎರಡು ಸ್ಪೆಲ್ಲಿಂಗ್ ಗಳನ್ನು ಡೂಡ್‍ಲೈಸ್ ಮಾಡಿದ್ದು, ಅದರಲ್ಲಿ ಅಗ್ನಿಶಾಮಕ,ಪೊಲೀಸ್,ಅಧಿಕಾರಿ,ವೈದ್ಯರು,ನರ್ಸ,ಸರ್ಕಾರಿ ಅಧಿಕಾರಿಗಳ ಹೀಗೆ ಎಲ್ಲ ಕೊರೋನಾ ವಾರಿಯರ್ಸ ಸಂಕೇತ ಬಳಸಿದೆ. ಇನ್ನೊಂದೆಡೆ ಹೃದಯದ ಚಿತ್ರದೊಂದಿಗೆ ಧನ್ಯವಾದ ಸಮರ್ಪಿಸಿದೆ.
ಕಳೆದ ವರ್ಷ ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು ವಿಶ್ವದಾದ್ಯಂತ ಹಬ್ಬಿದ್ದು ಜನಜೀವನವನ್ನೆ ಅಸ್ತವ್ಯಸ್ಥಮಾಡಿದೆ. ವಿಶ್ವದಾದ್ಯಂತ ಇದುವರೆಗೂ ಅಂದಾಜು 9,21,000 ಜನರನ್ನು ಕೊರೋನಾ ಬಲಿ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಕೊರೋನಾ ವಾರಿಯರ್ಸ ಗೆ ಗೂಗಲ್ ಡೂಡಲ್ ಸೆಲ್ಯೂಟ್…!
Follow Us