ವಾಷಿಂಗ್ಟನ್: ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿಯನ್ನು ಅಮೆರಿಕ ಸೇನಾಪಡೆ ಹತ್ಯೆಗೈದಿದೆ.
ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಅಮೆರಿಕ ಸೇನಾಪಡೆ, ಅರೇಬಿಯನ್ ಪೆನಿನ್ಸುಲಾದಲ್ಲಿ ರಿಮಿಯನ್ನು ಹತ್ಯೆ ಮಾಡಿದೆ.
ಅಲ್ ಖೈದಾ ಮುಖ್ಯಸ್ಥ ರಿಮಿ ಹತ್ಯೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ಅಮೆರಿಕದ ನೌಕಾ ನೆಲೆ ಮೇಲಿನ ದಾಳಿ ಹೊಣೆಯನ್ನು ಅಲ್ ಖೈದಾ ಹೊತ್ತ ಹಿನ್ನೆಲೆಯಲ್ಲಿ ಅಮೆರಿಕ ಈ ಕಾರ್ಯಾಚರಣೆ ನಡೆಸಿದೆ.
ಅಮೆರಿಕದ ಫ್ಲೋರಿಡಾ ನೌಕಾ ನೆಲೆ ಮೇಲೆ ಡಿ.6 ರಂದು ಅಲ್ ಖೈದಾ ನಡೆಸಿದ ದಾಳಿಯಲ್ಲಿ ವಾಯುದಳದ ಅಧಿಕಾರಿ ಸೇರಿ ಅಮೆರಿಕದ ಮೂವರು ನಾಯಕರನ್ನು ಹತ್ಯೆಗೈದಿದ್ದ.
ಅಮೆರಿಕ ಸೇನಾಪಡೆಯಿಂದ ಅಲ್ ಖೈದಾ ಮುಖ್ಯಸ್ಥ ಖಾಸಿಂ ರಿಮಿ ಹತ್ಯೆ
Follow Us