newsics.com
ನವದೆಹಲಿ: ಚೀನಾ ಕಂಪನಿಗಳ 12,000 ರೂ.ಗಳಿಗಿಂತ (150 ಡಾಲರ್) ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಮಾರಾಟ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಕುಗ್ಗುತ್ತಿರುವ ದೇಶೀಯ ಮೊಬೈಲ್ ಉದ್ಯಮ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ಈ ನಿರ್ಧಾರ ಕಾರ್ಯರೂಪಕ್ಕೆ ಬಂದರೆ ಶಿಯೋಮಿ ಕಾರ್ಪ್ ಸೇರಿದಂತೆ ಚೀನಾ ಬ್ರಾಂಡ್‌ಗಳಿಗೆ ತೀವ್ರ ಹೊಡೆತ ನೀಡಬಹುದು ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಜೂನ್ 2022ರವರೆಗಿನ ತ್ರೈಮಾಸಿಕದಲ್ಲಿ ಮಾರಾಟವಾದ ಮೊಬೈಲ್‌ಗಳ ಮಾರಾಟದಲ್ಲಿ ಶೇ.80ರಷ್ಟು ಪಾಲನ್ನು ಚೀನಾ ಮೂಲದ ಕಂಪನಿಗಳೇ ಪಡೆದುಕೊಂಡಿವೆ ಎಂದು ಟ್ರ್ಯಾಕರ್ ಕೌಂಟರ್ ಪಾಯಿಂಟ್ ಮಾಹಿತಿ ನೀಡಿದೆ. ಈ ಸ್ಥಿತಿಯನ್ನು ಬದಲಿಸಿ ದೇಶೀಯ ಮೊಬೈಲ್ ಮಾರುಕಟ್ಟೆ ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕಾಗಿ 150 ಡಾಲರ್‌ಗಿಂತ ಕಡಿಮೆ ಬೆಲೆಯ ಚೀನಾ ಮೂಲದ ಸ್ಮಾರ್ಟ್‌ಫೋನ್ ಮಾರಾಟ ನಿರ್ಬಂಧಿಸಲು ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಚೀನಾದ ಪ್ರಮುಖ ಕಂಪನಿಗಳನ್ನು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವ ಭಾರತದಿಂದ ಹೊರದಬ್ಬುವ ಉದ್ದೇಶವನ್ನೂ ಕೇಂದ್ರ ಸರ್ಕಾರ ಹೊಂದಿದೆ ಎನ್ನಲಾಗಿದೆ.
ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ
ನೋಟಿಸ್ ಬೋರ್ಡ್ ಮೇಲೆ ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿದ್ದ ರಾಕೇಶ್ ಅಡಿಗ!
ಕ್ರಿಕೆಟರ್ ರಾಜೇಶ್ವರಿಗೆ 15 ಲಕ್ಷ ರೂ. ಬಹುಮಾನ ಘೋಷಿಸಿದ ರಾಜ್ಯ ಸರ್ಕಾರ