newsics.com
ನವದೆಹಲಿ: ಕೊರೊನಾ ಅಬ್ಬರದ ನಡುವೆಯೇ ಕೇಂದ್ರ ಸರ್ಕಾರ ಅನ್ ಲಾಕ್ 5.0 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಹಂತ ಹಂತವಾಗಿ ಶಾಲಾ ಕಾಲೇಜು ಆರಂಭಕ್ಕೆ ಅನುಮತಿ ನೀಡಿದೆ.
ಅಕ್ಟೋಬರ್ 15 ರ ಬಳಿಕ ಶಾಲೆಗಳನ್ನೂ ಹಂತ ಹಂತವಾಗಿ ತೆರೆಯಬಹುದು ಎಂದಿರುವ ಕೇಂದ್ರ ಸರ್ಕಾರ, ಈ ಬಗೆಗಿನ ನಿರ್ಧಾರವನ್ನು ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಆಯಾ ರಾಜ್ಯಗಳೇ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಪೋಷಕರ ಜತೆ ಸಭೆ ನಡೆಸಿ ಶಾಲಾ ಕಾಲೇಜು ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಶಾಲಾ ಕಾಲೇಜು ಆರಂಭದ ಬಗ್ಗೆ ಆಯಾ ರಾಜ್ಯವೇ ನಿರ್ಧಾರ ತೆಗೆದುಕೊಳ್ಳಬೇಕು, ಇದರ ಜತೆಗೆ ಶಾಲಾ ಕಾಲೇಜು, ಕೋಚಿಂಗ್ ಸಂಸ್ಥೆಗಳನ್ನು ತೆರೆಯುವ ಬಗ್ಗೆ ರಾಜ್ಯ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿ ತಿಳಿಸಿದೆ.
ಈ ಮಧ್ಯೆ, ಥಿಯೇಟರ್, ಕ್ರೀಡಾಪಟುಗಳ ತರಬೇತಿಗಾಗಿ ಬಳಸಲಾಗುವ ಈಜುಕೊಳಗಳನ್ನು ಅಕ್ಟೋಬರ್ 15 ರಿಂದ ತೆರೆಯಲು ಅನುಮತಿ ನೀಡಿದೆ. ಜತೆಗೆ ಮನರಂಜನಾ ಉದ್ಯಾನಗಳು ಮತ್ತು ಇತರ ರೀತಿಯ ಮನರಂಜನಾ ಸ್ಥಳಗಳ ಆರಂಭಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದೆ.