ಮುಂಬೈ: ಮಹಿಳಾ ರೋಗಿಗಳನ್ನು ಹತ್ಯೆಗೈದು, ಆ ಶವಗಳ ಮೇಲೆ ತೆಂಗಿನಗಿಡ ನೆಡುತ್ತಿದ್ದ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವೈದ್ಯ ಸತಾರಾದ ಸಂತೋಷ್ ಪಾಲ್ ಸುಮಾರು 22 ಮಹಿಳಾ ರೋಗಿಗಳನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದ್ದು, ಈವರೆಗೆ 6 ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ.
ಸಂತೋಷ್ ಎಂಬಿಬಿಎಸ್ ಮಾಡಿರುವುದಾಗಿ ಹೇಳಿದ್ದರೂ, ಆತನ ಬಳಿ ಎಲೆಕ್ಟ್ರೋ ಹೋಮಿಯೋಪಥಿ ಪದವಿಯಿತ್ತು. ಅನೇಕ ಆಸ್ಪತ್ರೆಗಳಿಗೆ ಹೋಗ್ತಿದ್ದ ಸಂತೋಷ್ ಚಿಕಿತ್ಸೆಗೆ ನೀಡುವ ಔಷಧಗಳ ಬಗ್ಗೆ ತಿಳಿದುಕೊಂಡಿದ್ದ. ಒಂಟಿಯಾಗಿರುವ ಹಾಗೂ ಬಡ ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ಕುಕೃತ್ಯ ಎಸಗುತ್ತಿದ್ದ.
ಸ್ವಯಂಘೋಷಿತ ವೈದ್ಯ ಸಂತೋಷ್ ಹಾಗೂ ನರ್ಸ್ ಸೇರಿ ಮಹಿಳಾ ರೋಗಿಗಳಿಗೆ ಇಂಜೆಕ್ಷನ್ ವೊಂದನ್ನು ನೀಡುತ್ತಿದ್ದರು. ಅದು ಸ್ನಾಯುಗಳನ್ನು ನಿಷ್ಕ್ರಿಯಗೊಳಿಸುತ್ತಿತ್ತು. ರೋಗಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದರು. ಬಳಿಕ ಹೆಣವನ್ನು ಮನೆ ಅಂಗಳದಲ್ಲಿ ಹೂತು ಅದರ ಮೇಲೆ ತೆಂಗಿನ ಅಥವಾ ಇನ್ಯಾವುದಾದರೂ ಗಿಡ ನೆಡುತ್ತಿದ್ದ.
ಮಹಿಳಾ ರೋಗಿಗಳ ಹತ್ಯೆಗೈದು ಆ ಶವಗಳ ಮೇಲೆ ಗಿಡ ನೆಡುತ್ತಿದ್ದ ಡಾಕ್ಟರ್!
Follow Us