newsics.com
ಭಾರತದ ಮೂರೂ ಸೇನಾ ಪಡೆಗಳ ಮೊದಲ ಮಹಾದಂಡನಾಯಕ (ಸಿಡಿಎಸ್) ಬುಧವಾರ(ಡಿ.8) ಮಧ್ಯಾಹ್ನ ತಮಿಳುನಾಡಿನ ಊಟಿ ಬಳಿಯ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದಿದ್ದಾರೆ. ರಾವತ್ ಪತ್ನಿ ಮಧುಲಿಕಾ ರಾವತ್ ಕೂಡ ಸಾವಿಗೀಡಾಗಿದ್ದಾರೆ. ಇವರಿಬ್ಬರಲ್ಲದೆ ಸೇನಾಧಿಕಾರಿಗಳೂ ಸೇರಿ 11 ಜನ ಮೃತಪಟ್ಟಿದ್ದಾರೆ.
ಬಿಪಿನ್ ರಾವತ್ ಉತ್ತರಾಖಂಡನ್ನ ಪೌರಿಯಲ್ಲಿ 1958ರಲ್ಲಿ ಜನಿಸಿದ್ದರು. ತಂದೆ ಲಕ್ಷ್ಮಣ್ ಸಿಂಗ್, ನಿವೃತ್ತ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ.
ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (2020ರ ಜನವರಿ1) ಭಾರತೀಯ ಸೇನೆಯ ಟಾಪ್ ಮೋಸ್ಟ್, 4 ಸ್ಟಾರ್ ಸೈನ್ಯಾಧಿಕಾರಿ, ಲಡಾಖ್ ಬಿಕ್ಕಟ್ಟಿನ ವೇಳೆ ಚೀನಾ ವಿರುದ್ಧ ವ್ಯೂಹ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತ ರಕ್ಷಣಾ ರಂಗದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದವರು. ತ್ರಿವಿಧ ದಳಗಳ 17 ಕಮಾಂಡ್ಗಳನ್ನು ಸೇರಿಸುವ ಗುರುತರ ಹೊಣೆ ಹೊತ್ತಿದ್ದರು (ಇಂಟಿಗ್ರೇಟೆಡ್ ಥೇಟರ್ ಕಮಾಂಡ್). ತ್ರಿವಿಧ ದಳಗಳು ಮತ್ತು ಸರ್ಕಾರದ ನಡುವೆ ಕೊಂಡಿಯಂತೆ ಕೆಲಸ ಮಾಡಿದ್ದರು.
1987ರಲ್ಲಿ ಸಮ್ದೊರಂಗ್ ಚು ಕಣಿವೆಯಲ್ಲಿ ಚೀನಾ ಎದುರಿಸಿದ್ದ ರಾವತ್ ನೇತೃತ್ವದ ಪಡೆ, 2015ರಲ್ಲಿ ಮಯನ್ಮಾರ್ ಗಡಿಗೆ ನುಗ್ಗಿ ರಾವತ್ ನೇತೃತ್ವದ 3 ಕಾಪ್ರ್ಸ್ ಕಾರ್ಯಾಚರಣೆ ನಡೆಸಿದ್ದರು.
ಬಿಪಿನ್ ಪತ್ನಿ ಮಧುಲಿಕಾ ಸೈನಿಕರ ಮಕ್ಕಳ ಅಭಿವೃದ್ಧಿಗಾಗಿ, ಸೈನಿಕರ ಶ್ರೇಯೋಭಿವೃದ್ಧಿಗಾಗಿ ಎಡಬ್ಲ್ಯೂಡಬ್ಲ್ಯೂಎ ಎನ್ನುವ ಸರ್ಕಾರೇತರ ಸಂಸ್ಥೆ ನಡೆಸುತ್ತಿದ್ದರು. ಈ ಮೂಲಕ ಯೋಧರ ಕುಟುಂಬಗಳಿಗೆ ಮಧುಲಿಕಾ ನೆರವಿನ ಹಸ್ತ ಚಾಚಿದ್ದರು. ಯೋಧರ ಪತ್ನಿಯರಿಗೆ ಸ್ವಯಂ ಉದ್ಯೋಗದ ತರಬೇತಿ ನೀಡುತ್ತಿದ್ದರು.
ಪತನಗೊಂಡ ಹೆಲಿಕಾಪ್ಟರ್ನ ತಾಕತ್ತು ಭಯಂಕರ
ಭಾರತೀಯ ವಾಯುಪಡೆ ಹೆಚ್ಚಾಗಿ ಬಳಸುವ ಎಂಐ-17ವಿ5 ಆಧುನಿಕ ಸಾರಿಗೆ ಹೆಲಿಕಾಪ್ಟರ್ ಆಗಿದೆ.
ಪ್ರಯಾಣಿಕರು, ಸರಕು ಹಾಗೂ ವಸ್ತುಗಳನ್ನು ಸಾಗಿಸಲು ಪೂರಕವಾಗಿ ಈ ಹೆಲಿಕಾಪ್ಟರ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಯುದ್ಧತಂತ್ರದ ವಾಯುಪಡೆ ಹಾಗೂ ಸೈನಿಕರ ತಂಡಗಳನ್ನು ಸಾಗಿಸಿ ಯಾವುದೇ ಸ್ಥಳದಲ್ಲೂ ಅವರನ್ನು ಇಳಿಸುವ ಸಾಮರ್ಥ್ಯವನ್ನು ಈ ಹೆಲಿಕಾಪ್ಟರ್ ಹೊಂದಿದೆ.
ಆಧುನಿಕ ಏವಿಯಾನಿಕ್ಸ್ ನೊಂದಿಗೆ ಸಜ್ಜುಗೊಂಡಿರುವ ಎಂಐ-17ವಿ5 ಹೆಲಿಕಾಪ್ಟರ್ ಯಾವುದೇ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿ, ಹಗಲು-ರಾತ್ರಿ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಸೋವಿಯತ್ ರಾಷ್ಟ್ರ ರಷ್ಯಾ ವಿನ್ಯಾಸಗೊಳಿಸಿರುವ ಹೆಲಿಕಾಪ್ಟರ್ ಇದಾಗಿದೆ. ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ನಿಗದಿತವಲ್ಲದ ಪ್ರದೇಶಗಳಲ್ಲೂ ಲ್ಯಾಂಡಿಂಗ್ ಆಗುವ ಸಾಮರ್ಥ್ಯ ಹೊಂದಿದೆ.
ಸುಮಾರು 1,300 ಕೆಜಿಯಷ್ಟು ತೂಕದ ವಸ್ತುಗಳನ್ನು ಹೊತ್ತು ಸಾಗಿಸಲು ಸಮರ್ಥವಾಗಿದೆ. ಅಲ್ಲದೇ ಗಂಟೆಗೆ ಸುಮಾರು 250 ಕಿ.ಮೀ.ನಷ್ಟು ವೇಗವಾಗಿ ಹಾರುವ ಸಾಮರ್ಥ್ಯ ಹೊಂದಿದೆ.