ಬೆಂಗಳೂರು: ಗ್ರೇಟ್ ಇಂಡಿಯನ್ ಬಸ್ಟರ್ಡ್, ಏಷ್ಯನ್ ಆನೆ, ಬೆಂಗಾಲ್ ಫ್ಲೋರಿಯನ್ ವಿನಾಶದಂಚಿನಲ್ಲಿವೆ.
ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿನಾಶದಂಚಿನಲ್ಲಿರುವ ಭಾರತದ ಈ ಪ್ರಾಣಿ ಪಕ್ಷಿಗಳೂ ಸೇರಿವೆ.
ಭಾರಿ ಗಾತ್ರದ ಪಕ್ಷಿಗಳ ಪೈಕಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಕೂಡ ಒಂದಾಗಿದ್ದು, ಒಣಹವೆ ಪ್ರದೇಶದಲ್ಲಿ ಸಂರಕ್ಷಿಸಲ್ಪಟ್ಟಿದೆ. 2018ರ ಗಣತಿಯಲ್ಲಿ 150ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡಿಲ್ಲ. ಏಷ್ಯಾದ ಆನೆಗಳು ಭಾರತ ಉಪಖಂಡದ ತುಂಬಾ ಕಾಣಸಿಗುತ್ತವೆ. ಆದರೆ, 1986ರಿಂದ ಈವರೆಗೆ ಆನೆಗಳ ಸಂತತಿ ಕ್ಷೀಣಿಸುತ್ತಿದೆ. ಭಾರತ ಉಪಖಂಡ, ಕಾಂಬೋಡಿಯಾ ಹಾಗೂ ವಿಯೆಟ್ನಾಂನಲ್ಲಿ ಕಾಣಸಿಗುವ ಬೆಂಗಾಲ್ ಫ್ಲೋರಿಕನ್ ಕೂಡ ವಿನಾಶದ ಅಂಚಿನಲ್ಲಿರುವ ಪಕ್ಷಿ ಸಂಕುಲವಾಗಿದ್ದು, 1,000 ಸಂಖ್ಯೆಯಲ್ಲಿವೆ ಎಂದು 2017ರಲ್ಲಿ ಎಣಿಕೆ ಮಾಡಲಾಗಿತ್ತು.
ವಿನಾಶದ ಅಂಚಿನಲ್ಲಿರುವ 10 ವಲಸೆ ಪ್ರಾಣಿ/ಪಕ್ಷಿಗಳ ಪಟ್ಟಿಯ ಬಗ್ಗೆ ಬೆಂಗಳೂರಿನ ಗಾಂಧಿನಗರದಲ್ಲಿ ಫೆ.15 ರಿಂದ 22 ರವರೆಗೆ ವಲಸೆ ವನ್ಯಜೀವಿಗಳ ಸಂರಕ್ಷಣೆ ಕುರಿತ ಯುಎನ್ ಸಮಾವೇಶ ನಡೆಯಲಿದೆ. ವಿಶ್ವದ 126 ಪರಿಸರವಾದಿಗಳು, ವನ್ಯಜೀವಿ ಸಂರಕ್ಷಕರು ಈ ವಲಸಿಗ ಪ್ರಾಣಿ/ಪಕ್ಷಿ ಪ್ರಬೇಧಗಳನ್ನು ಉಳಿಸುವ ಬಗ್ಗೆ ಚರ್ಚಿಸಲಿದ್ದಾರೆ.
ವಿನಾಶದಂಚಿನಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್, ಏಷ್ಯನ್ ಆನೆ!
Follow Us