ಮುಂಬೈ: ನೇಪಾಳ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿದ್ದ ವಿಶ್ವದ ಅತಿ ಪುಟ್ಟ ಮನುಷ್ಯ ನೇಪಾಳದ ಖಗೇಂದ್ರ ಥಾಪ ಮಗರ್ (29) ಅಸುನೀಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಕಠ್ಮಂಡು ಸಮೀಪದ ಪೋಖ್ರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಥಾಪ ಅವರು 67 ಸೆಂಟಿ ಮೀಟರ್ (2.42 ಇಂಚು) ಎತ್ತರವಿದ್ದರು. 2010ರಲ್ಲಿ ವಿಶ್ವದ ನಡೆದಾಡುವ ಚಿಕ್ಕ ವ್ಯಕ್ತಿ ಎಂದು ಘೋಷಿಸಲಾಗಿತ್ತು.
ವಿಶ್ವದ ಎತ್ತರವಾದ ಮೌಂಟ್ ಎವರೆಸ್ಟ್ ಪ್ರದೇಶದಲ್ಲಿರುವ ಚಿಕ್ಕ ವ್ಯಕ್ತಿ ಎಂದು ಅವರನ್ನು ಹೆಸರಿಸಲಾಗಿತ್ತು.
ಸದ್ಯ, 70.21 ಸೆಂಟಿಮೀಟರ್ ಎತ್ತರವಿರುವ ಕೊಲಂಬಿಯಾದ ಎಡ್ವರ್ಡ್ ನಿನೊ ಹೆರ್ನಾಂಡೆಜ್ ಪುಟ್ಟ ಮನುಷ್ಯ ಎಂದು ಗಿನ್ನೀಸ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
ವಿಶ್ವದ ಪುಟ್ಟ ಮನುಷ್ಯ ಖಗೇಂದ್ರ ಇನ್ನಿಲ್ಲ
Follow Us